ಕಾನಹೊಸಹಳ್ಳಿ ಸಮೀಪದ ಬಣವಿಕಲ್ಲು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿ ಪೂಜೆ ನೆರವೇರಿಸಿದರು. ಬಣವಿಕಲ್ಲು ಎರ‌್ರಿಸ್ವಾಮಿ, ಗ್ರಾಪಂ ಅಧ್ಯಕ್ಷೆ ಓಬಮ್ಮ ಪಾಪಣ್ಣ, ಉಪಾಧ್ಯಕ್ಷ ಆರ್.ವೀರಣ್ಣ, ಸದಸ್ಯರಾದ ಅಲ್ಲಾಬಕ್ಷಿ, ಪ್ರಶಾಂತಗೌಡ, ಅಜ್ಜನಗೌಡ, ಕುರಿಹಟ್ಟಿ ಬೋಸಣ್ಣ, ಪಿಡಿಒ ಶಾಂತಮ್ಮ, ಚೌಡಪುರ ಸಿದ್ದಣ್ಣ, ಚೌಡೇಶಿ, ಕುಬೇರಗೌಡ ಇದ್ದರು. 
ಜಿಲ್ಲೆ

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ

Kopala - Desk - Eraveni

ಕಾನಹೊಸಹಳ್ಳಿ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೂಡು ರಸ್ತೆಗಳ ಅಭಿವೃದ್ಧಿಪಡಿಸುವ ಅಗತ್ಯವಿದ್ದು, ಆದ್ಯತೆ ನೀಡಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಬಣವಿಕಲ್ಲು ಗ್ರಾಮದಲ್ಲಿ ಶುಕ್ರವಾರ 6 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಅನೇಕ ವರ್ಷಗಳಿಂದ ಬಣವಿಕಲ್ಲು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಿಂದ ಉಲ್ಲಾನಹಳ್ಳಿ, ಕಂಚೋಬನಹಳ್ಳಿ, ಮಾಡ್ಲಾಕನಹಳ್ಳಿ, ಕಡೇಕೊಳ್ಳ, ಮಾಕನಡಕುನಿಂದ ಚಿಕ್ಕಜೋಗಿಹಳ್ಳಿಗೆ ಸಂಪರ್ಕಿಸುವ ರಾಜ್ಯದ ಮುಖ್ಯರಸ್ತೆಯಾಗಿದ್ದು ಅಭಿವೃದ್ಧಿ ಕಾಮಗಾರಿ ಮಾಡಿರಲಿಲ್ಲ.

ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದವು. ಹೀಗಾಗಿ ಆರು ಕೋಟಿ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಿರುವೆ. ಇದರಂತೆ ಬಾಕಿ ಉಳಿದ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು. ಪ್ರತಿ ಗ್ರಾಮದಲ್ಲಿ ರಸ್ತೆಯ ಜಾಗ ಅತಿಕ್ರಮಿಸಿಕೊಂಡಿರುವ ಮಾಹಿತಿ ಇದ್ದು, ವಿಸ್ತರಣೆಗೆ ಸಾರ್ವಜನಿಕರು ಸಹಕರಿಸಬೇಕು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಬೇಕೆಂದರು.

ಬಣವಿಕಲ್ಲು ಎರ‌್ರಿಸ್ವಾಮಿ, ಗ್ರಾಪಂ ಅಧ್ಯಕ್ಷೆ ಓಬಮ್ಮ ಪಾಪಣ್ಣ, ಉಪಾಧ್ಯಕ್ಷ ಆರ್.ವೀರಣ್ಣ, ಸದಸ್ಯರಾದ ಅಲ್ಲಾಬಕ್ಷಿ, ಪ್ರಶಾಂತಗೌಡ, ಅಜ್ಜನಗೌಡ, ಕುರಿಹಟ್ಟಿ ಬೋಸಣ್ಣ, ಪಿಡಿಒ ಶಾಂತಮ್ಮ, ಚೌಡಪುರ ಸಿದ್ದಣ್ಣ, ಚೌಡೇಶಿ, ಕುಬೇರಗೌಡ ಇದ್ದರು.