ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ತಾಲೂಕು ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಚೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ "ಗ್ರಾಮೀಣ ಕ್ರೀಡಾಕೂಟ ಎಲ್ಲರ ಗಮನಸೆಳೆಯಿತು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ೧ ರಿಂದ ೪ನೇ ತರಗತಿಯವರೆಗಿನ ಬಾಲಕಿಯರ ೧೦೦ ಮೀ ಓಟದಲ್ಲಿ ಪ್ರಥಮ ಸ್ಥಾನವನ್ನು ಅಫ್ನಾ ಕಂಡಕರೆ ಪ್ರಾಥಮಿಕ ಶಾಲೆ ಹಾಗೂ ದ್ವಿತೀಯ ಸ್ಥಾನ ಆರ್.ಎಸ್.ಚೆಟ್ಟಳ್ಳಿ ಶಾಲೆಯ ಮುಬಶ್ಶೀರ ಪಡೆದುಕೊಂಡರು.
೧ ರಿಂದ ೦೪ ತರಗತಿಯವರೆಗಿನ ಬಾಲಕರ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಸುಮಿತ್(ಪ್ರ), ಶಾನಿದ್(ದ್ವಿ) ಸ್ಥಾನ ಪಡೆದುಕೊಂಡರು. ೫ ರಿಂದ ೭ನೇ ತರಗತಿಯ ಬಾಲಕರ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಸಂದೇಶ(ಪ್ರ), ಮಣಿಕಂಠ ದ್ವಿತೀಯ ಸ್ಥಾನ ಪಡೆದರು.
೫ ರಿಂದ ೭ನೇ ತರಗತಿಯವರೆಗಿನ ಬಾಲಕಿಯರ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ನಸೀಯ(ಪ್ರ), ಅಸ್ನಾ ದ್ವಿತೀಯ ಸ್ಥಾನ ಪಡೆದುಕೊಂಡರು. ಪ್ರೌಢ ಶಾಲಾ ವಿಭಾಗದಲ್ಲಿ ಚೆಟ್ಟಳ್ಳಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಪವನ್(ಪ್ರ), ಮದನ್ ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಶಜಿನಾ(ಪ್ರ) ಹಾಗೂ ತೇಜಸ್ವಿ ದ್ವಿತೀಯ ಸ್ಥಾನ ಪಡೆದರು.
ಮಹಿಳೆಯ ವಿಷದ ಚೆಂಡು ಸ್ಪರ್ಧೆಯಲ್ಲಿ ಜನಿತಾ ಪ್ರಥಮ ಹಾಗೂ ನಸೀಮ ದ್ವಿತೀಯ ಸ್ಥಾನ ಪಡೆದರೆ, ಮಹಿಳೆಯರ ೨೦ ರಿಂದ ೩೦ ವರ್ಷದೊಳಗಿನ ಓಟದ ಸ್ಪರ್ಧೆಯಲ್ಲಿ ಶಾಂಭವಿ(ಪ್ರ), ರಸೀನಾ(ದ್ವಿ), ೩೧ ವರ್ಷ ದಿಂದ ೪೦ ವರ್ಷದೊಳಗಿನ ಓಟದ ಸ್ಪರ್ಧೆಯಲ್ಲಿ ಜೆನಿತಾ(ಪ್ರ), ವತ್ಸಲ(ದ್ವಿ), ೪೧ ವರ್ಷದಿಂದ ೫೦ ವರ್ಷದೊಳಗಿನ ಓಟದ ಸ್ಪರ್ಧೆಯಲ್ಲಿ ಸುಮಿತ್ರ(ಪ್ರ), ಪ್ರಮೀಳಾ ದ್ವಿತೀಯ ಸ್ಥಾನ ಪಡೆದರು.
೨೦ ರಿಂದ ೩೦ ವರ್ಷದೊಳಗಿನ ಓಟದಲ್ಲಿ ಇಸ್ಮಾಯಿಲ್ ಕಂಡಕರೆ(ಪ್ರ), ಅಶ್ರಫ್(ದ್ವಿ), ೩೦ ರಿಂದ ೪೦ ವರ್ಷದೊಳಗಿನ ಓಟದಲ್ಲಿ ಮಹೇಂದ್ರ(ಪ್ರ), ಜಂಶಾದ್ ದ್ವಿತೀಯ ಸ್ಥಾನ ಪಡೆದರು. ಅಂಗನವಾಡಿ ಮಕ್ಕಳ ೬೦ ಮೀಟರ್ ಓಟದ ಸ್ಪರ್ಧೆಯಲ್ಲಿ ರಮ್ಯ(ಪ್ರ), ದಕ್ಷಿತ್(ದ್ವಿ), ನಕುಲ್(ತೃ), ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಮುಫಿಲಿಯಾ(ಪ್ರ), ಪ್ರಜ್ವಲ್(ದ್ವಿ), ರಮ್ಯ ತೃತೀಯ ಸ್ಥಾನ ಪಡೆದರು.
ಪುರುಷರ ವಾಲಿಬಾಲ್ ಪಂದ್ಯದಲ್ಲಿ ಪೊನ್ನತ್ಮೊಟ್ಟೆ ಪ್ರಥಮ ಹಾಗೂ ಗಾಂಧಿ ಯೂತ್ ಕ್ಲಬ್ ಕಂಡಕರೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕರ ಕಬಡ್ಡಿ ಪಂದ್ಯದಲ್ಲಿ ಜೆಡ್ ಎಕ್ಸ್ ಬಾಯ್ಸ ಕೂಡ್ಲೂರು ಚೆಟ್ಟಳ್ಳಿ ಪ್ರಥಮ ಹಾಗೂ ಬುಲ್ಲಿ ಬಾಯ್ಸ್ ಚೆಟ್ಟಳ್ಳಿ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ಥ್ರೋ ಬಾಲ್ ಪಂದ್ಯದಲ್ಲಿ ಸರ್ಕಾರಿ ನೌಕರರ ತಂಡ ಪ್ರಥಮ ಸ್ಥಾನ ಪಡೆದರೆ, ಪ್ರೌಢ ಶಾಲಾ ಶಿಕ್ಷಕಿಯರ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರು ಕಬಡ್ಡಿ ಪಂದ್ಯದಲ್ಲಿ ಸರ್ಕಾರಿ ನೌಕರರ ತಂಡ ಪ್ರಥಮ ಹಾಗೂ ಚೆಟ್ಟಳ್ಳಿ ಪ್ರೌಢ ಶಾಲೆ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆಯಿತು.
ಗ್ರಾಮೀಣ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಟ್ಟಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತಪ್ಪ ವಹಿಸಿದ್ದರು. ಉಪಾಧ್ಯಕ್ಷೆ ವಿಮಲಾಕ್ಷಿ, ಪಿ.ಡಿ.ಓ ರಾಕೇಶ್, ಸದಸ್ಯರಾದ ಸಿಂಧೂ, ಮಾಲಾಶ್ರೀ ರಸೀನಾ, ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಚೆಟ್ಟಳ್ಳಿ ಭಾಗದ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ದೈಹಿಕ ಶಿಕ್ಷಕರು ಹಾಜರಿದ್ದರು.