ಅರಟಾಳ ಸಮೀಪದ ಕೋಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಆತ್ಮಾರಾಮ ಸ್ವಾಮೀಜಿ, ನಾಗರತ್ನ ಹೆಗಡೆ, ಸಂಜಯ ನಾಡಗೌಡ, ಜಯಶ್ರೀ ಬಂಡಗರ, ಮಲಗೌಡ ಪಾಟೀಲ, ಬಸಯ್ಯ ಶಾಸ್ತ್ರಿ ಇತರರಿದ್ದರು. 
ಜಿಲ್ಲೆ

ಗ್ರಾಮಾಭಿವೃದ್ಧಿ ಸಾಸಬೇಕಾದರೆ ಸಮನ್ವಯ ಮುಖ್ಯ

ಪ್ರಶಾಂತ ಹೂಗಾರ

ಅರಟಾಳ: ಗ್ರಾಮಾಭಿವೃದ್ಧಿ ಆಗಬೇಕಾದರೆ ಸಮನ್ವಯ ಹಾಗೂ ಪ್ರೋತ್ಸಾಹಿಸುವ ಗುಣ ಇರಬೇಕಾಗುತ್ತದೆ ಎಂದು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಹೇಳಿದರು.


ಸಮೀಪದ ಕೋಹಳ್ಳಿ ಗ್ರಾಮದ ಶ್ರೀ ಅಪ್ಪಯ್ಯಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಮನಸ್ಸು, ಹರಿದ ಭಾವಗಳ ಬೆಸೆಯುವ ಕಾರ್ಯ ಧರ್ಮಸ್ಥಳದಿಂದ ನಡೆಯುತ್ತಿದೆ. ಡಿಜಿಟಲ್ ಇಂಡಿಯಾ ಮೂಲಕ ಸಾಲ ವಿತರಣೆ, ವಿದ್ಯಾರ್ಥಿ ವೇತನ, ಆರ್ಥಿಕ ಅಭಿವೃದ್ಧಿ, ವ್ಯಸನ ಮುಕ್ತಿ ಶಿಬಿರ, ಶಾಲಾ ಕೋಣೆಗಳ ನಿರ್ಮಾಣ ಸೇರಿ ಹಲವು ವಿಧಾಯಕ ಕೆಲಸ ಮಾಡಲಾಗುತ್ತಿದೆ ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಜನಜಾಗೃತಿ ವೇದಿಕೆ ಅಧ್ಯಕ್ಷ ಸಂಜಯ ನಾಡಗೌಡ ಮಾತನಾಡಿ, ಸಂಘದ ಸೇವೆ ಅಪಾರ ಎಂದರು. ಕಕಮರಿ ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ ಮಾತನಾಡಿ, ಮಾಯೆ ಎನ್ನುವ ದೆವ್ವ ಬಡಿಯುವ ಮೊದಲು ಮೊದಲು ನಾವು ಬದಲಾಗಬೇಕು. ಸಮಾಜದ ಏಳಿಗೆಗೆ ಕೊಡುಗೆ ಕೊಡಬೇಕು ಎಂದರು. 101 ದಂಪತಿಯಿಂದ ಸಾಮೂಹಿಕ ಲಿಂಗಪೂಜೆ, ಉಡಿತುಂಬುವ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


ಗ್ರಾಪಂ ಅಧ್ಯಕ್ಷೆ ಜಯಶ್ರೀ ಬಂಡಗರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಲಗೌಡ ಪಾಟೀಲ, ಬಸಯ್ಯ ಶಾಸ್ತ್ರಿ, ಅಮರ ದುರ್ಗಣ್ಣವರ, ತಾಲೂಕು ಯೋಜನಾಕಾರಿ ರಜಬಅಲಿ ಮೇಲಿನಮನಿ, ಸುನೀಲ ಝರೆ, ದುಂಡಪ್ಪ ಅಸ್ಕಿ, ಪ್ರಿಯಾಂಕಾ ಬಡಚಿ, ಐಗಳಿ ಪಿಎಸ್‌ಐ ಸುಮಲತಾ ಆಸಂಗಿ, ಸಂತೋಷ ಹಿರೇಮಠ, ಅಶ್ವಿನಿ ಹಿರೇಮಠ ಇತರರು ಇದ್ದರು. ಸದಾನಂದ ಮಾಡಗ್ಯಾಳ ಸ್ವಾಗತಿಸಿ, ನಿರೂಪಿಸಿದರು, ವಲಯ ಮೇಲ್ವಿಚಾರಕ ಮಹಾಂತೇಶ ಪಿ.ಎಂ.ವಂದಿಸಿದರು.