ಹೊಸನಗರ ತಾಲೂಕಿನ ನಗರದಲ್ಲಿ ಕ್ರೀಡಾಕೂಟವನ್ನು ಕರುಣಾಕರ ಶೆಟ್ಟಿ ಮಾತನಾಡಿದರು. ದ್ಯಾವಪ್ಪಗೌಡ, ಕೆಂಚಪ್ಪ, ಸುಮನಾ ಭಾಸ್ಕರ್, ವಿಶ್ವನಾಥ ಇತರರಿದ್ದರು.  
ಜಿಲ್ಲೆ

ಗ್ರಾಮೀಣ ಮಕ್ಕಳಿಗೆ ಕ್ರೀಡಾ ಉತ್ತೇಜನ ಅಗತ್ಯ

ಹೊಸನಗರ: ಗ್ರಾಮೀಣ ಪ್ರದೇಶದ ಮಕ್ಕಳು ಸದೃಢರಾಗಿದ್ದು, ಅವರನ್ನು ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸಲು ಉತ್ತೇಜನ ನೀಡುವ ಅಗತ್ಯವಿದೆ ಎಂದು ಮೂಡುಗೊಪ್ಪ ಗ್ರಾಪಂ ಸದಸ್ಯ ಕರುಣಾಕರ ಶೆಟ್ಟಿ ಹೇಳಿದರು.

ತಾಲೂಕಿನ ನಗರ ಪ್ರೌಢಶಾಲಾ ಆವರಣದಲ್ಲಿ ಮೂಡುಗೊಪ್ಪ, ಕರಿಮನೆ, ಖೈರಗುಂದ, ಯಡೂರು ಮತ್ತು ಸುಳುಗೋಡು ಗ್ರಾಪಂ, ಸಮೂಹ ಸಂಪನ್ಮೂಲ ಕೇಂದ್ರ, ನೂಲಿಗ್ಗೇರಿ ಶಾಲಾಭಿವೃದ್ಧಿ ಸಮಿತಿ, ಸಂಯುಕ್ತವಾಗಿ ಹಮ್ಮಿಕೊಂಡಿದ್ದ 14 ವರ್ಷದ ವಯೋಮಿತಿಯೊಳಗಿನ ವಲಯ ಮಟ್ಟದ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿದ ಅವರು, ಕ್ರೀಡಾಕೂಟದ ಯಶಸ್ವಿಗೆ ಎಲ್ಲರ ಸಹಭಾಗಿತ್ವ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ ಎಸ್‌ಡಿಎಂಸಿ ಅಧ್ಯಕ್ಷ ದ್ಯಾವಪ್ಪಗೌಡ, ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾಕೂಟ ಮಹತ್ವದ್ದಾಗಿದೆ ಎಂದರು.
ಸ್ಥಳೀಯರಾದ ಕೆಂಚಪ್ಪ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಉಪಾಧ್ಯಕ್ಷೆ ಸುಮನಾ ಭಾಸ್ಕರ್, ಸದಸ್ಯರಾದ ವಿಶ್ವನಾಥ, ದೈಹಿಕ ಪರಿವೀಕ್ಷಕ ಬಾಲಚಂದ್ರರಾವ್, ಇಸಿಒ ಪರಮೇಶ್ವರಪ್ಪ, ಸಿಆರ್‌ಪಿ ಕೆ.ಆರ್.ರವಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿ.ಆರ್.ಅನ್ನಪೂರ್ಣ, ಮುಖ್ಯಶಿಕ್ಷಕಿ ಎ.ಎ.ಪ್ರಮೀಳಾ, ಜಿ.ಎಸ್.ಅರವಿಂದ್ ಇತರರಿದ್ದರು. ಸಿಆರ್‌ಪಿ ರೇಖಾ ಪ್ರಭಾಕರ ಕಾರ್ಯಕ್ರಮ ನಿರೂಪಿಸಿದರು.