ಜಿಲ್ಲೆ

ವಿಟ್ಲ ಸಹಕಾರಿಗೆ ಪದಾಽಕಾರಿಗಳ ಆಯ್ಕೆ - ಜಗನ್ನಾಥ ಸಾಲಿಯಾನ್ ಎಚ್. ಅಧ್ಯಕ್ಷ, ಮನೋರಂಜನ್ ಕೆ. ಆರ್. ಉಪಾಧ್ಯಕ್ಷ

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಮುಂದಿನ ೫ ವರ್ಷಗಳ ಸಾಲಿಗೆ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಗನ್ನಾಥ ಸಾಲಿಯಾನ್ ಎಚ್. ಹಾಗೂ ಉಪಾಧ್ಯಕ್ಷರಾಗಿ ಮನೋರಂಜನ್ ಕೆ. ಆರ್. ಅವಿರೋಧವಾಗಿ ಆಯ್ಕೆಯಾದರು.

ಆಡಳಿತ ಮಂಡಳಿ ಸದಸ್ಯರಾದ ಗೋವರ್ಧನ್ ಕುಮಾರ್ ಐ, ರಾಮದಾಸ್ ಶೆಣೈ ವಿ., ಮೋಹನ್ ಕೆ. ಎಸ್., ತಿರುಮಲೇಶ್ವರ ಭಟ್ ಪಿ, ಸತೀಶ್ ಪಿ, ಕೇಶವ ಎ., ಭಾಸ್ಕರ ಶೆಟ್ಟಿ, ವಿಶ್ವನಾಥ ಎಂ, ಜಯಂತಿ ಎಚ್. ರಾವ್, ಶುಭಲಕ್ಷ್ಮಿ, ದಯಾನಂದ ಆಳ್ವ ಕೆ, ಪೂವಪ್ಪ ಎಸ್, ದಿವಾಕರ ವಿ. ಮತ್ತಿತರರು ಉಪಸ್ಥಿತರಿದ್ದರು. ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಽಕಾರಿ ಶಿವಲಿಂಗಯ್ಯ ಎಂ. ನಡೆಸಿಕೊಟ್ಟರು. ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಽಕಾರಿ ಕೃಷ್ಣಮುರಳಿ ಶ್ಯಾಮ್ ಕೆ. ಸಹಕರಿಸಿದರು.

*ಮುಜುಗರ ತಪ್ಪಿಸಲು ಅಭಿನಂದನೆ : ಬಹುಮತ ಆಧಾರದಲ್ಲಿ ಆಯ್ಕೆಯಾದ ಅಧ್ಯಕ್ಷ ಜಗನ್ನಾಥ ಸಾಲಿಯಾನ್ ಎಚ್ ಹಾಗೂ ಉಪಾಧ್ಯಕ್ಷ ಮನೋರಂಜನ್ ಕೆ. ಆರ್. ಅವರನ್ನು ಬಿಜೆಪಿ ಕಚೇರಿಗೆ ಕರೆಸಿ ಅಭಿನಂದನೆ ಸಲ್ಲಿಸುವ ಮೂಲಕ ಪಕ್ಷಕ್ಕಾಗುವ ಮುಖಭಂಗವನ್ನು ತಪ್ಪಿಸಿಕೊಳ್ಳಲಾಯಿತು. ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ, ಎಸ್. ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಪುಣಚ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ಬಾಳೆಕಲ್ಲು, ಹರಿಪ್ರಸಾದ್ ಯಾದವ್, ಉದಯ ಆಲಂಗಾರು, ಶ್ರೀಕೃಷ್ಣ ವಿಟ್ಲ ಮತ್ತಿತರರು ಉಪಸ್ಥಿತರಿದ್ದಾರು.

ಲಾಬಿ, ಅಸಮಾಧಾನ

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಭಾನುವಾರ ಜಗನ್ನಾಥ ಸಾಲಿಯಾನ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂಬ ಸೂಚನೆ ನೀಡಿದ್ದರು. ಪಕ್ಷದಲ್ಲಿ ನಿರ್ಣಾಯಕರೆನಿಸಿದ ಇಬ್ಬರಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರ ಹೆಸರು ಕೇಳಲ್ಪಟ್ಟಿದ್ದು, ಬಿಜೆಪಿ ಕಚೇರಿಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳುವ ಬಗ್ಗೆ ಸಭೆ ನಡೆಯಿತು. ಹಾಲಿ ಅಧ್ಯಕ್ಷರೆ ಮುಂದುವರಿಯುವುದಕ್ಕೆ ವಿರೋಽಸಿದ ಗೋವರ್ಧನ್ ಕುಮಾರ್ ಐ, ರಾಮದಾಸ್ ಶೆಣೈ ವಿ., ಮೋಹನ್ ಕೆ. ಎಸ್., ತಿರುಮಲೇಶ್ವರ ಭಟ್ ಪಿ, ಸತೀಶ್ ಪಿ, ಸೇರಿ ಐದು ಮಂದಿ ಹಾಜರಾಗಿದ್ದಾರೆ. ಕೊನೆಯ ಕ್ಷಣದವರೆಗೆ ಉಳಿದ ೧೦ ಮಂದಿ ತಮ್ಮ ನಿರ್ಧಾರವನ್ನು ಬದಲಾಯಿಸದ ಕಾರಣ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರು ಹೊಸಬರನ್ನು ಅಧ್ಯಕ್ಷ ಮಾಡುವ ನಿರ್ಧಾರದಿಂದ ಹಿಂದೆ ಸರಿದರು. ಇದು ಪಕ್ಷದ ಕೆಲವು ಪ್ರಮುಖರನ್ನು ಕೆರಳಿಸುವಂತೆ ಮಾಡಿ, ಮಾತಿಗೆ ಮಾತು ಬೆಳೆದು ಗಂಭೀರ ಪರಿಸ್ಥಿತಿಯವರೆಗೆ ತಲುಪಿದೆ.