ಜಿಲ್ಲೆ

ರೂರಲ್ ಕಾಲೇಜಿನಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಕಲೆ,  ನಾಟಕೋತ್ಸವ

Dharwada - Basavaraj Idli

ಹುಬ್ಬಳ್ಳಿ: ಧಾರವಾಡ ತಾಲೂಕಿನ ಸತ್ತೂರ ಶ್ರೀ ಬಸವೇಶ್ವರ ಎಜುಕೇಶನ್ ಆ್ಯಂಡ್ ಡೆವಲಪಮೆಂಟ್ ಟ್ರಸ್ಟ್‌ನ ರೂರಲ್ ಬಿ. ಇಡಿ ಕಾಲೇಜು ದ್ವೀತಿಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಕಲೆ ಮತ್ತು ನಾಟಕೋತ್ಸವ ಕಾರ್ಯಕ್ರಮ ಗುರುವಾರ ಏರ್ಪಡಿಸಲಾಗಿತ್ತು.

ಸಂಸ್ಥೆಯ ಟ್ರಸ್ಟಿ ನಾಗರಾಜ ಕೊಟಗಿ ಉತ್ಸವ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಲ್ಲಿ ಒಂದೊಂದು ಕಲೆ ಮತ್ತು ಸಾಮರ್ಥ್ಯ ಅಡಗಿರುತ್ತದೆ. ಅದನ್ನು ಹೊರ ತರಲು ಸೂಕ್ತ ವೇದಿಕೆ ಬೇಕಾಗುತ್ತದೆ. ಅವಕಾಶಗಳನ್ನು ಬಳಸಿಕೊಂಡು ಶಿಕ್ಷಕರಾದವರು ವಿದ್ಯಾರ್ಥಿಗಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಬೇಕು ಎಂದರು.

ಪ್ರಶಿಕ್ಷಣಾರ್ಥಿಗಳ ಒಂಬತ್ತು ತಂಡಗಳನ್ನು ರಚಿಸಿ ಒಟ್ಟು ಒಂಬತ್ತು ನಾಟಕಗಳನ್ನು ಪ್ರದರ್ಶನ ಮಾಡಲಾಯಿತು. ಉತ್ತಮ ಪ್ರದರ್ಶನ ನೀಡಿದ ನಾಟಕಗಳಿಗೆ ಮೂರು ಬಹುಮಾನಗಳನ್ನು ನೀಡಲಾಯಿತು.

ರೂರಲ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಮಹಾಂತೇಶ ಹಿರೇಮಠ, ಸ್ಪರ್ಧೆಯ ನಿರ್ಣಾಯಕರಾದ ಎಲ್.ವೈ. ಬುಡ್ಡನವರ, ಜಿ.ಎಲ್. ಕುಲಕರ್ಣಿ, ಶಾಂತಯ್ಯ ಹಿರೇಮಠ ಮತ್ತು ಕಾರ್ಯಕ್ರಮ ಸಂಯೋಜಕ ರಂಗನಾಥ ದಾಸರ, ಮಂಗಲಾ ಹಿರೇಮಠ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಶಿಕ್ಷಣಾರ್ಥಿ ಲಕ್ಷ್ಮಿ ಹಿರೇಮಠ ಹಾಗೂ ರೇಣುಕಾ ಕಮತೂರ ಪ್ರಾರ್ಥನೆ ಹಾಡಿದರು. ಸುಷ್ಮಾ ಗೌಡರ ನಿರೂಪಿಸಿದರು.