ಹರಿಹರ: ಗ್ರಾಮೀಣ ಗಹಬಳಕೆಯ ವಿದ್ಯುತ್ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಬಗೆಹರಿಸಬೇಕು ಎಂದು ಬೆಸ್ಕಾಂ ಎಇಇ ಸಿ. ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಉಪ ವಿಭಾಗದ ಕಚೇರಿಯಲ್ಲಿ ಶನಿವಾರ ಕರೆದಿದ್ದ ಗ್ರಾಹಕರ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು.
ಮಳೆಗಾಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಪದೇ ಪದೆ ವಿದ್ಯುತ್ ವ್ಯತ್ಯಯವಾಗುತ್ತದೆ. ತಕ್ಷಣ ಸ್ಥಳಕ್ಕೆ ಧಾವಿಸಿ ದುರಸ್ತಿಪಡಿಸಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನಲ್ಲಿ ಗಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು ಸರಾಸರಿ 3.25 ಕೋಟಿ ರೂ. ಮೌಲ್ಯದ ವಿದ್ಯುತ್ ನೀಡಲಾಗುತ್ತಿದೆ. ಕಳೆದ ಹತ್ತು ತಿಂಗಳಿನಿಂದ ಅಂದಾಜು 35 ಕೋಟಿ ರೂ.ಗಳಷ್ಟು ವಿದ್ಯುತ್ ಸಾರ್ವಜನಿಕರಿಗೆ ನೀಡಲಾಗಿದೆ ಎಂದರು.
ಸಹಾಯಕ ಎಂಜಿನಿಯರ್ ಎಂ. ವಾರ್ಕಂಡೇಯ, ಕಿರಿಯ ಇಂಜಿನಿಯರ್ ಮಹಾವೀರ್ ಬೋಗಾರ್, ಸಹಾಯಕ ಲೆಕ್ಕಾಧಿಕಾರಿ ನಾಗರಾಜ್, ಗ್ರಾಹಕರಾದ ಖಲೀಮುಲ್ಲಾ, ಜಿಲಾನಿ, ಅಬ್ದುಲ್ ರಹವಾನ್, ಅರುಣ್ ಕುವಾರ್, ಕೆ.ಸಿ. ರಾಕೇಶ್, ಎಸ್.ಎಂ. ಮಂಜುನಾಥ್ ಇತರರಿದ್ದರು.