ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ಕೊಮ್ಮೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರೂಪಾ ವಾಸು ಮತ್ತು ಉಪಾಧ್ಯಕ್ಷರಾಗಿ ರುಕ್ಮಿಣಿ ಸೋಮು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ರೂಪಾ ವಾಸು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರುಕ್ಮಿಣಿ ಸೋಮು ಇಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಲೂಕು ಸಹಕಾರ ಅಭಿವೃದ್ಧಿ ಅಕಾರಿ ಭರತ್‌ಕುಮಾರ್ ಅವಿರೋಧವಾಗಿ ಆಯ್ಕೆಯನ್ನು ಘೋಷಿಸಿದರು. ಸಹಾಯಕ ಚುನಾವಣಾಕಾರಿಯಾಗಿ ಸಂಘದ ಕಾರ್ಯದರ್ಶಿ ಸಹನಾ ಕಾರ್ಯನಿರ್ವಹಿಸಿದರು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಿರ್ದೇಶಕರಾದ ರೇಣುಕಾ ಶ್ರೀನಿವಾಸ್, ಜ್ಯೋತಿ ಸುರೇಶ್, ಪ್ರೇಮಾ ರಘುನಾಥ್, ಸುಧಾ ಶಿವಕುಮಾರ್, ಜ್ಯೋತಿ ಜವರೇಗೌಡ, ಭಾಗ್ಯಾ ರಾಮೇಗೌಡ, ರಾಧಾ ನಾಗರಾಜು, ಕಾರ್ಯದರ್ಶಿ ಸಹನಾ, ಗ್ರಾಪಂ ಸದಸ್ಯ ನಾಗೇಗೌಡ, ಮಾಜಿ ಸದಸ್ಯ ಕೆ.ಬಿ.ಜಗದೀಶ್, ಹಿರಿಯ ಮುಖಂಡರಾದ ಶಿವೇಗೌಡ, ಹರಿಹರಪುರ ಶ್ರೀಧರ್, ನಾಗೇಗೌಡ, ಅನಿಲ್‌ಗೌಡ, ಸುನಿಲ್‌ಗೌಡ, ರಘುನಾಥ್, ರಾಮೇಗೌಡ, ಮಂಜುನಾಥ್, ಕೆ.ಬಿ ಸುರೇಶ್, ಸೋಮು, ಮಂಜುನಾಥ್ ಕೆ.ಎಚ್.ಕುಮಾರ್, ಯುವ ಮುಖಂಡರಾದ ಕೊಮ್ಮೇನಹಳ್ಳಿ ಕೌಶಿಕ್, ಧನುಷ್, ಸುನಿಲ್, ಗಿರೀಶ್, ನಾಗೇಂದ್ರ ಉಪಸ್ಥಿತರಿದ್ದರು.