ಜಿಲ್ಲೆ

ಗ್ಲೋಬಲ್‌ಮಟ್ಟದಲ್ಲಿ ದ್ವಿತೀಯ ಸ್ಥಾನ

ಸೌಮ್ಯ ಆರ್

ಬೆಳ್ತಂಗಡಿ: ಇಎಸ್‌ಆರ್‌ಎಜಿ ಆನ್‌ಲೈನ್‌ನಲ್ಲಿ ನಡೆಸಲಾದ ಇಕೋಆ್ಯಕ್ಷನ್-ಬಯೋ ಡೈವರ್ಸಿಟಿ ಕ್ವಿಜ್ ಸ್ಪರ್ಧೆಯಲ್ಲಿ ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ(ಸಿಬಿಎಸ್‌ಇ) ಶಾಲೆ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಕುನಾಲ್ ಎಸ್.ಎಚ್., ವರ್ಷ ಸಿ. ಗ್ಲೋಬಲ್ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು, ಶಿಕ್ಷಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ.