ಜಿಲ್ಲೆ

ಋಣಾನುಬಂಧ ಕಾರ್ಯಕ್ರಮ ಫೆ. 9ರಂದು

ಮರಿದೇವ ಹೂಗಾರ

ಹುಬ್ಬಳ್ಳಿ: ಶಿವಮೊಗ್ಗ ದೈವಜ್ಞ ಪ್ರತಿಭಾರಂಗ, ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹುಬ್ಬಳ್ಳಿ ದೈವಜ್ಞ ಬ್ರಾಹ್ಮಣ ಸಮಾಜದಿಂದ ಇಲ್ಲಿಯ ವಿದ್ಯಾನಗರದ ದೈವಜ್ಞ ಭವನದಲ್ಲಿ ಫೆ. 9ರಂದು ಋಣಾನುಬಂಧ-2025 ರಾಜ್ಯಮಟ್ಟ ವಧು-ವರರ ಅನ್ವೇಷಣೆ ಮತ್ತು ಜಾತಕ ವಿನಿಮಯ ಸಮಾವೇಶ ಏರ್ಪಡಿಸಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೈವಜ್ಞ ಬ್ರಾಹ್ಮಣ ಸುವರ್ಣಕಾರ ಸೊಸೈಟಿ ಅಧ್ಯಕ್ಷ ಸತೀಶ ಶೇಜವಾಡಕರ, ಅಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಸಮಾವೇಶ ನಡೆಯಲಿದೆ ಎಂದರು.

ಮಧ್ಯಾಹ್ನ 1ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಶಾಸಕ ಮಹೇಶ ಟೆಂಗಿನಕಾಯಿ, ಮುಖಂಡರಾದ ವಿಷ್ಣು ರಾಯ್ಕರ, ವಿಜಯ ವೆರ್ಣೇಕರ, ಪ್ರೇಮಾ ಭಟ್, ಉದಯ ವೆರ್ಣೇಕರ, ಪೂಜಾ ಶೇಜವಾಡಕರ ಅತಿಥಿಗಳಾಗಿ ಆಗಮಿಸುವರು ಎಂದರು.

ದೈವಜ್ಞ ಪ್ರತಿಭಾ ರಂಗದ ಅಧ್ಯಕ್ಷ ವೆಂಕಟೇಶ ರಾಯ್ಕರ ಅಧ್ಯಕ್ಷತೆ ವಹಿಸುವರು. ಮಂಜುನಾಥ ಶೇಟ್, ನಾಗರಾಜ ರಾಯ್ಕರ್ ಉಪಸ್ಥಿತರಿರುವರು ಎಂದು ತಿಳಿಸಿದರು.

ವಿಷ್ಣು ರಾಯ್ಕರ್, ಗೋವಿಂದರಾಜ ಹರ್ಡೆಕರ, ಮಂಜುನಾಥ ವೆರ್ಣೇಕರ, ಶ್ರೀಪಾದ ರೇವಣಕರ ಸುದ್ದಿಗೋಷ್ಠಿಯಲ್ಲಿದ್ದರು.