ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಪಿಡ್ಡಪ್ಪ ನಾಯಕ, ಕಾರ್ಯದರ್ಶಿ ಯೂಸೂಫ್ ಸಾಬ್, ಗಿರಿಯಪ್ಪ ಪೂಜಾರಿ, ಶಬ್ಬೀರ್ ಜಾಲಹಳ್ಳಿ ಇತರರಿದ್ದರು. 
ಜಿಲ್ಲೆ

ನಿಯಮದಂತೆ ಮರಳು ಸಾಗಣೆಗೆ ಅವಕಾಶ ನೀಡಿ

Kopala - Desk - Eraveni

ದೇವದುರ್ಗ: ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಕಟ್ಟಡ ಸೇರಿ ಇತರ ನಿರ್ಮಾಣ ಕಾಮಗಾರಿಗೆ ಸರ್ಕಾರದ ನಿಯಮಾನುಸಾರ ಮರಳು ಸಾಗಣೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ತಹಸಿಲ್ ಕಚೇರಿ ಮುಂದೆ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಕಟ್ಟಡ ಕಾರ್ಮಿಕರು ಸಣ್ಣಪುಟ್ಟ ಮನೆ ಸೇರಿ ಇತರ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮರಳು ಸಾಗಣೆ ಬಂದ್ ಮಾಡಿದ್ದರಿಂದ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಇದರಿಂದ ಕೆಲಸವಿಲ್ಲದೆ ಜನರು ಗುಳೆ ಹೋಗುವ ಸ್ಥಿತಿ ಎದುರಾಗಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆಯಡಿ ಬಡವರು ಮನೆ ನಿರ್ಮಿಸಿಕೊಳ್ಳಲು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷ್ಣಾನದಿಯಿಂದ ತಾಲೂಕಿನಲ್ಲಿ ಮಾತ್ರ ಸರ್ಕಾರದ ನಿಯಮ ಪ್ರಕಾರ ಮರಳು ಸಾಗಣೆಗೆ ಅವಕಾಶ ನೀಡಬೇಕು. ಗ್ರಾಪಂಗೆ ಒಂದು ಮರಳು ಮಾರಾಟ ಕೇಂದ್ರ ತೆರೆಯಬೇಕು. ಹೊರಜಿಲ್ಲೆ, ರಾಜ್ಯಕ್ಕೆ ಮರಳು ಸಾಗಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಸಂಘಟನೆ ತಾಲೂಕು ಅಧ್ಯಕ್ಷ ಪಿಡ್ಡಪ್ಪ ನಾಯಕ, ಕಾರ್ಯದರ್ಶಿ ಯೂಸೂಫ್ ಸಾಬ್, ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಪ್ರಮುಖರಾದ ಶಬ್ಬೀರ್ ಜಾಲಹಳ್ಳಿ, ನರಸಣ್ಣ ನಾಯಕ, ಮಹಾಲಿಂಗ ದೊಡ್ಡಮನಿ, ಪ್ಯಾಟಪ್ಪ, ಯಲ್ಲಪ್ಪ, ಷರೀಫ್, ಖಾಜಾ ಹುಸೇನಪ್ಪ, ಬಸವರಾಜ ಚಿಂಚೋಡಿ, ಹನುಮಂತ ದೊಡ್ಡಮನಿ, ಶಾಂತಪ್ಪ ಗಾಣಧಾಳ, ಹನುಮಂತ ಗುರಿಕಾರ ಇತರರಿದ್ದರು.