filter: 115; fileterIntensity: 0.8; filterMask: 1; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.42995244, 0.62364805);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35; 
ಜಿಲ್ಲೆ

ಹಾಳಾದ ಹಾಲಳ್ಳಿ ಬಸ್ ತಂಗುದಾಣ

ಅರಟಾಳ: ಪ್ರಯಾಣ ಬೆಳೆಸಲು ಬರುವ ಸಾರ್ವಜನಿಕರ ವಿಶ್ರಾಂತಿಗೆಂದು ನಿರ್ಮಿಸಿದ್ದ ಹಾಲಳ್ಳಿ ಗ್ರಾಮದ ಬಸ್ ತಂಗುದಾಣ ಸಮರ್ಪಕ ನಿರ್ವಹಣೆ ಇಲ್ಲದೆ ಶಿಥಿಲಗೊಂಡು ಬೀಳುವ ಹಂತ ತಲುಪಿದೆ.

ಜವಾಹರ ರೋಜಗಾರ ಯೋಜನೆಯಡಿ 2005-06ರಲ್ಲಿ ನಿರ್ಮಿಸಿದ್ದ ಹಾಲಳ್ಳಿ ಬಸ್ ತಂಗುದಾಣ ಕಟ್ಟಡ ಗುಣಮಟ್ಟದ್ದಾಗಿಲ್ಲ. ವಿಶ್ರಾಂತಿಗಾಗಿ ತಂಗುದಾಣದಲ್ಲಿ ಕುಳಿತ ಪ್ರಯಾಣಿಕರ ಮೇಲೆ ಕಟ್ಟಡದ ಸಿಮೆಂಟ್ ಉದುರಿ ಬಿದ್ದ ಘಟನೆಗಳು ಕೂಡ ಜರುಗಿವೆ. ಐದು ಸಾವಿರ ಜನಸಂಖ್ಯೆ ಹೊಂದಿರುವ ಹಾಲಳ್ಳಿ ಗ್ರಾಮದ ಬಸ್ ತಂಗುದಾಣದ ಸುತ್ತ ಕಸ ಬೆಳೆದಿದ್ದು, ಅಸ್ವಚ್ಛತೆ ತಾಂಡವವಾಡುತ್ತಿದೆ. ಪಕ್ಕದಲ್ಲೆ ಮುಳ್ಳಿನ ಕಂಟೆ ಇದ್ದು, ಬಸ್ ತಂಗುದಾಣದ ಒಳಗೆ ವಿದ್ಯುತ್ ಕೊರತೆ ಇದೆ. ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ರಾತ್ರಿ ಹೊತ್ತು ಬಸ್ ತಂಗುದಾಣಕ್ಕೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ.

ಪ್ರಯಾಣಿಕರಲ್ಲಿ ಭಯ: ನಿತ್ಯ ಶಾಲೆ, ಕಾಲೇಜು, ಮಾರುಕಟ್ಟೆ, ಉದ್ಯೋಗ ಅರಸಿ ಬೇರೆ ಊರಿಗೆ ತೆರಳುವ ಸಾವಿರಾರು ಜನರು ಇದೆ ತಂಗುದಾಣವನ್ನು ಅವಲಂಬಿಸಿದ್ದಾರೆ. ಆದರೆ, ಕಟ್ಟಡ ಬೀಳುವ ಹಂತದಲ್ಲಿರುವುದರಿಂದ ನಿತ್ಯ ಭಯದಲ್ಲೆ ಇಲ್ಲಿ ವಿಶ್ರಾಂತಿ ಪಡೆಯಬೇಕಾಗಿದೆ. ಮಳೆ ಬೀಳುವ ಸಮಯದಲ್ಲಿ ಮಳೆಯ ರಕ್ಷಣೆಗಾಗಿ ಶಿಥಿಲಗೊಂಡ ಬಸ್ ತಂಗುದಾಣದಲ್ಲೆ ಆಶ್ರಯಿಸಬೇಕಾದ ಅನಿವಾರ್ಯ ಇದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಅಪಾಯ ಸಂಭವಿಸುವ ಮುನ್ನವೇ ಕ್ರಮ ಕೈಗೊಂಡು ಗುಣಮಟ್ಟದ ಬಸ್ ತಂಗುದಾನ ನಿರ್ಮಿಸುವಂತೆ ಗ್ರಾಮಸ್ಥರು ಅಗ್ರಹಿಸಿದ್ದಾರೆ.