ಬೆಳ್ತಂಗಡಿ: ಉತ್ತಮ ಮನೋಭಾವ ಇದ್ದರೆ ಸಾಧನೆ ಸುಲಭ ಸಾಧ್ಯ. ವೃತ್ತಿಯಲ್ಲಿ ನಿರಂತರ ಕಲಿಕೆ ಇರಬೇಕು. ವೃತ್ತಿಯಲ್ಲಿ ಸ್ವಯಂ ಶಿಸ್ತು ಅಳವಡಿಸಿಕೊಳ್ಳಬೇಕು ಹಾಗೂ ವ್ಯವಹಾರದಲ್ಲಿ ಬದ್ಧತೆ ಇಟ್ಟುಕೊಂಡು ಮುಂದುವರಿಯಬೇಕು ಎಂದು ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ವಿಶ್ವೇಶ್ವರ ಪ್ರಸಾದ್ ಹೇಳಿದರು.
ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನ ನಡೆದ ಇಲೆಕ್ಟ್ರಿಕಲ್ ಮೋಟಾರು ರಿವೈಂಡಿಂಗ್ ಮತ್ತು ಪಂಪ್‌ಸೆಟ್ ರಿಪೇರಿ ತರಬೇತಿ ಸಮಾರೋಪದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ರುಡ್‌ಸೆಟ್ ನಿರ್ದೇಶಕ ಅಜೇಯ ಅಧ್ಯಕ್ಷತೆ ವಹಿಸಿದ್ದರು. ಆನಂದ, ರೋಹಿತ್, ಸಂಗಮೇಶ್ ತರಬೇತಿ ಅನುಭವ ಹಂಚಿಕೊಂಡರು. ರುಡ್‌ಸೆಟ್ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸ್ವಾಗತಿಸಿದರು. ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು.