ಜಿಲ್ಲೆ

ಸಾಧನೆಗೆ ಮನಸ್ಸು, ಗುರಿ, ಪ್ರಯತ್ನ ಮುಖ್ಯ : ಸುನೀಲ್ ಪಂಡಿತ್ ಅಭಿಪ್ರಾಯ

ಸೌಮ್ಯ ಆರ್

ಬೆಳ್ತಂಗಡಿ: ಡಾ.ಡಿ.ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದ ರುಡ್‌ಸೆಟ್ ಸಂಸ್ಥೆ ಮೂಲಕ ನೀಡು ತರಬೇತಿಗಳು ನಿರುದ್ಯೋಗ ನಿವರಾಣೆಗೆ ಮಹತ್ವ ಮೈಲುಗಲ್ಲು ಆಗಿದೆ. ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚಿನ ಮಹತ್ವವಿದ್ದು, ವೃತ್ತಿಗೆ ಸಂಬಂಧಿಸಿದ ತರಬೇತಿ ಪಡೆಯಬೇಕು. ಜತೆಗೆ ಸಾಧಿಸುವ ಮನಸ್ಸು, ಗುರಿ ಹಾಗೂ ಪ್ರಯತ್ನವಿದ್ದಾಗ ಯಶಸ್ಸು ನಿಶ್ಚಿತ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿಯುತ ಪದವಿ ಪೂರ್ವ ಕಾಲೇಜು ಪ್ರಾಶುಂಪಾಲ ಸುನೀಲ್ ಪಂಡಿತ್ ಹೇಳಿದರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಟಿ.ವಿ. ಟೆಕ್ನಿಷಿಯನ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ವಂದಿಸಿದರು. ರಂಜಿತ್, ವಿನೋದ ಕುಮಾರ್ ತರಬೇತಿ ಅನುಭವ ಹಂಚಿಕೊಂಡರು.