ಹುಬ್ಬಳ್ಳಿ: ಇಲ್ಲಿಯ ಮಂಗಳವಾರ ಪೇಟೆಯಲ್ಲಿರುವ ರುದ್ರಾಕ್ಷಿಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಭಾನುವಾರ ಶ್ರೀ ಬಸವಲಿಂಗ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ನಗರದ ವಿವಿಧ ಗಣ್ಯರು ಹಾಗೂ ನಾಗರಿಕರ ವತಿಯಿಂದ ಶ್ರೀ ಮಠದ ಸ್ವಾಮೀಜಿಗಳಿಗೆ ಭಕ್ತಿ ಕಾಣಿಕೆ ಸಲ್ಲಿಸಲಾಯಿತು.
ಭಕ್ತರಾದ ಎಂ.ಎಸ್. ನಿಜಗುಣಿಸ್ವಾಮಿ, ಮಹಾಂತೇಶ ಗಿರಿಮಠ, ಎಂ.ಎಸ್. ಪ್ರಸನ್ನ, ಎಸ್.ಜಿ. ಅಪ್ಪಣ್ಣ, ಅಕ್ಕಮಹಾದೇವಿ ಭಜನಾ ಮಂಡಳ ಸದಸ್ಯರು ಇದ್ದರು.