ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದ ರುದ್ರಭೂಮಿಯಲ್ಲಿ ಪರಮೇಶ್ವರನ ಮೂರ್ತಿ ಸ್ಥಾಪಿಸಲು ಭೂಮಿಪೂಜೆ ನೆರವೇರಿಸಲಾಯಿತು. ಮಹಾದೇವ ಮೋಪಗಾರ, ಶ್ರೀಶೈಲ ಸಂತಿ, ಗುರುಪಾದ ಮೊಪಾಗಾರ ಇದ್ದರು. 
ಜಿಲ್ಲೆ

ರುದ್ರಭೂಮಿಯಲ್ಲಿ ಪರಶಿವನ ಮೂರ್ತಿ ಸ್ಥಾಪಿಸಲು ಭೂಮಿಪೂಜೆ

ರಬಕವಿ/ಬನಹಟ್ಟಿ: ತಾಲೂಕಿನ ಯಲ್ಲಟ್ಟಿ ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಗ್ರಾಮದ ರುದ್ರಭೂಮಿಯಲ್ಲಿ ಪರಮೇಶ್ವರನ ಮೂರ್ತಿ ಸ್ಥಾಪಿಸಲು ಭೂಮಿಪೂಜೆ ನೆರವೇರಿಸಲಾಯಿತು.

ಗ್ರಾಪಂ ಅಧ್ಯಕ್ಷ ಮಹಾದೇವ ಮೋಪಗಾರ ಮಾತನಾಡಿ, ಗ್ರಾಮದ ರುದ್ರಭೂಮಿಯಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಯೋಜನೆ ಕುರಿತು ಬಹುದಿನಗಳಿಂದ ಚಿಂತನೆ ನಡೆದಿತ್ತು. ರುದ್ರಭೂಮಿಯೆಂದರೆ ಭಯವಾಗಬಾರದು. ಭಕ್ತಿ ಭಾವ ಆ ಸ್ಥಳದಲ್ಲಿ ನಿರ್ಮಾಣವಾಗಬೇಕು ಎಂಬ ಸದುದ್ದೇಶದಿಂದ ಈ ಕಾರ್ಯಕ್ಕೆ ನಾವೆಲ್ಲ ಮುಂದಾಗಿದ್ದೇವೆ ಎಂದರು.

ಗ್ರಾಪಂ ಉಪಾಧ್ಯಕ್ಷ ಶ್ರೀಶೈಲ ಸಂತಿ, ಟಿಎಪಿಎಂಸಿ ಅಧ್ಯಕ್ಷ ಗುರುಪಾದ ಮೊಪಾಗಾರ, ಬಸಪ್ಪ ಝಳಕಿ, ಚನ್ನಪ್ಪ ಮಗದುಮ್, ಅಶೋಕ ಕಿತ್ತೂರು, ಶಂಕರ ಸಂತಿ, ಸಿದ್ದಪ್ಪ ಝಳಕಿ, ಗಂಗಯ್ಯ ಮಠಪತಿ, ಸದಾಶಿವ ಬಳವಾಡ, ಸಿದಗಿರಿ ಚನಾಳ, ಆನಂದ ನಾವಿ, ಬಾಬು ಮುದಕ್ಕಣ್ಣವರ, ಬಸಪ್ಪ ತೇಲಿ, ಅಣ್ಣಪ್ಪ ಸಂತಿ, ಹನುಮಂತ ಮದರಖಂಡಿ, ಶ್ರೀಶೈಲ ಸಂತಿ, ಮಹಾಂತೇಶ ಮಾಳಗೌಡ ಹಾಗೂ ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರು ಮತ್ತು ಗ್ರಾಮದ ಹಿರಿಯರು ಇದ್ದರು.