ಜಿಲ್ಲೆ

ಅಧಿಕ ಶ್ರಾವಣ ಮಾಸದ ಪ್ರಯುಕ್ತ ಆಗಸ್ಟ್ 12 ರಂದು ಕಲಬುರಗಿಯ ಶ್ರೀ ಶ್ರೀ ಜ್ಞಾನ ಕ್ಷೇತ್ರದಲ್ಲಿ ರುದ್ರಾಭಿಷೇಕ

ಕಲಬುರಗಿ

ಅಧಿಕ ಶ್ರಾವಣ ಮಾಸದ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ಕಲಬುರಗಿ ನಗರದ ಪಬ್ಲಿಕ್ ಗಾರ್ಡನ್ ಹತ್ತಿರವಿರುವ ಶ್ರೀ ಶ್ರೀ ಜ್ಞಾನ ಕ್ಷೇತ್ರದಲ್ಲಿ ಶನಿವಾರ ಆಗಸ್ಟ್ 12 ರಂದು ಸಂಜೆ 6 ಗಂಟೆಯಿಂದ ರುದ್ರ ಪಠಣದೊಂದಿಗೆ ರುದ್ರಾಭಿಷೇಕ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಸುಮಧುರ ಸತ್ಸಂಗ ಹಾಗೂ ಬಂದವರೆಗೆಲ್ಲ ಪ್ರಸಾದ ವ್ಯವಸ್ಥೆ ಕೂಡ ಇರುತ್ತದೆ.

ಈ ಶುಭ ಕಾರ್ಯದಲ್ಲಿ ಸಾರ್ವಜನಿಕರೆಲ್ಲರಿಗೂ ಪಾಲ್ಗೊಳ್ಳಲು ಅವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದುಕೊಳ್ಳಲು ಸಾಧಕಿ ವಾಣಿಶ್ರೀ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ: 9902061243 ಸಂಪರ್ಕಿಸಬಹುದು.