ಜಿಲ್ಲೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್ ವರದಿ ಗೊಂದಲ

Dakshina Kannada

ಮಂಗಳೂರು: ಆರ್‌ಟಿಪಿಸಿಆರ್ ಪರೀಕ್ಷಾ ವರದಿ ಗೊಂದಲದಿಂದಾಗಿ ಕಳೆದ ಕೆಲ ಸಮಯದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಹರೈನ್‌ಗೆ ತೆರಳುವ ಅನೇಕ ಪ್ರಯಾಣಿಕರು ಕೊನೆಯ ಕ್ಷಣದಲ್ಲಿ ಪ್ರಯಾಣ ತಪ್ಪಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಭಾರತ ಸರ್ಕಾರದಿಂದ ಒಪ್ಪಿಗೆ ಪಡೆದ ಅಧಿಕೃತ ಆಸ್ಪತ್ರೆಗಳಿಂದ ಪಡೆದ ಆರ್‌ಟಿಪಿಸಿಆರ್ ಪರೀಕ್ಷೆ ವರದಿಗಳೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ತಿರಸ್ಕೃತಗೊಳ್ಳುತ್ತಿವೆ. ಕಳೆದ ಸೋಮವಾರ ಮಂಗಳೂರು - ಬಹರೈನ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ 6ಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಬೋರ್ಡಿಂಗ್ ತಿರಸ್ಕರಿಸಲಾಗಿತ್ತು. ಬಹರೈನ್ ಕನ್ನಡ ಸಂಘಕ್ಕೆ ದೂರುಗಳು ಬಂದಿರುವುದಾಗಿ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಆರ್‌ಟಿಪಿಸಿಆರ್ ವರದಿಯ ಕ್ಯೂಆರ್ ಕೋಡ್ ವಿಮಾನ ನಿಲ್ದಾಣದಲ್ಲಿ ರೀಡ್ ಆಗದಿರುವುದರಿಂದ ಸಮಸ್ಯೆ ಆಗುತ್ತಿದೆ. ಹೀಗಾಗಿ ಪರೀಕ್ಷೆಗೆ ಒಳಪಟ್ಟವರು ಕ್ಯೂಆರ್ ಕೋಡ್ ಸರಿಯಾಗಿದೆಯೇ ಎಂಬುದನ್ನು ಕೋಡ್ ರೀಡರ್ ಆ್ಯಪ್‌ಗಳ ಮೂಲಕ ಲ್ಯಾಬ್‌ಗಳಲ್ಲೇ ಇದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.