ತುಮಕೂರು: ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಪ್ಯಾರಾಮೆಡಿಕಲ್, ಫಾರ್ಮಸಿ, ನರ್ಸಿಂಗ್, ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕರೊನಾ ನಿಯಂತ್ರಣದ ಮುಂಜಾಗ್ರತಾ ಕ್ರಮಗಳ ಕುರಿತಂತೆ ಜಿಲ್ಲೆಯಲ್ಲಿನ ಪ್ಯಾರಾಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜು ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳ ವಾಹಿತಿ ಪಡೆದು ಕಡ್ಡಾಯವಾಗಿ 24 ಗಂಟೆಯೊಳಗೆ ಆರ್‌ಟಿಪಿಸಿಆರ್ ಪರೀಕ್ಷೆ ವಾಡಿಸಬೇಕೆಂದು ತಾಕೀತು ಮಾಡಿದರು.
ನೆಗೆಟಿವ್ ಬಂದವರಿಗೆ ವಾತ್ರ ಕಾಲೇಜು ಪ್ರವೇಶಾತಿ ನೀಡಬೇಕು ಹಾಗೂ ಪರೀಕ್ಷೆ ಫಲಿತಾಂಶ ಬರುವವರೆಗೂ ಪ್ರತ್ಯೇಕ ಕೊಠಡಿಯಲ್ಲಿ ಐಸೋಲೇಷನ್ ವಾಡಬೇಕು. ಕೇರಳ, ಮಹಾರಾಷ್ಟ್ರದಿಂದ ಬರುವ ವಿದ್ಯಾರ್ಥಿಗಳಿಂದ ಪ್ರಯಾಣದ ವಾಹಿತಿ ಪಡೆದುಕೊಳ್ಳುವಂತೆ ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳನ್ನು ನೋಡಲು ಬರುವ ಪಾಲಕರಿಗೂ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ವಾಡಿಸಿ 24 ಗಂಟೆಯೊಳಗೆ ವರದಿ ಪಡೆದು ನೆಗೆಟಿವ್ ಬಂದರೆ ವಾತ್ರ ಭೇಟಿ ವಾಡಲು ಅವಕಾಶ ಕಲ್ಪಿಸಲಾಗುವುದು. ಅನುಮತಿ ಪಡೆಯದೇ ವಿದ್ಯಾರ್ಥಿಗಳನ್ನು ಭೇಟಿ ವಾಡಿದ್ದಲ್ಲಿ ಅಂತಹ ಪಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ವೈ.ಎಸ್.ಪಾಟೀಲ್ ಎಚ್ಚರಿಸಿದರು.
ಮಕ್ಕಳನ್ನು ಭೇಟಿಯಾಗಲು ಬರುವ ಪಾಲಕರು ಹೋಟೆಲ್, ಲಾಡ್ಜ್‌ಗಳಲ್ಲಿ ಉಳಿದುಕೊಳ್ಳುವ ಸಾಧ್ಯತೆಯಿದೆ, ಅಂತಹವರ ವಾಹಿತಿಯನ್ನು ಆರೋಗ್ಯ ಇಲಾಖೆ ಅಥವಾ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಸಹಾಯವಾಣಿ 9449843269ನ್ನು ಸಂಪರ್ಕಿಸಿ ವಾಹಿತಿ ನೀಡುವಂತೆ ವಾಲೀಕರಿಗೆ ತಿಳಿಸಿದರು.
ಜಿಲ್ಲೆಯಲ್ಲಿರುವ ಫಾರ್ಮಸಿ, ಪ್ಯಾರಾಮೆಡಿಕಲ್, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಲಸಿಕೆ ಪಡೆಯಲು ವಾ.6ರವರೆಗೂ ಅವಕಾಶವಿದೆ. ಕಾಲೇಜುಗಳ ಆಡಳಿತ ಮಂಡಳಿಗಳು ಹೆಸರು ನೋಂದಾಯಿಸಲು ವಿದ್ಯಾರ್ಥಿಗಳಿಗೆ ಸೂಚಿಸುವಂತೆ ಡಿಎಚ್‌ಒ ಡಾ.ನಾಗೇಂದ್ರಪ್ಪ ಹೇಳಿದರು. ಇಂದಿನಿಂದ 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕರೊನಾ ಲಸಿಕೆ ನೀಡಲಾಗುವುದು.
ಡಯಾಬೀಟಿಸ್, ಬಿಪಿ ಮತ್ತಿತರ ದೀರ್ಕಾಲೀನ ಖಾಯಿಲೆಗೊಳಪಟ್ಟಿರುವ 45 ವರ್ಷದಿಂದ 59 ವರ್ಷದೊಳಗಿರುವವರು ವೈದ್ಯರಿಂದ ಪ್ರವಾಣ ಪತ್ರ ಪಡೆದ ದಾಖಲೆಯೊಂದಿಗೆ ್ಚಟಜ್ಞಿ.ಜಟ.ಜ್ಞಿ ವೆಬ್‌ಪೋರ್ಟಲ್ ಅಥವಾ ಆರೋಗ್ಯ ಸೇತು ಆ್ಯಪ್‌ನಲ್ಲಿ ಸ್ವಯಂ ನೋಂದಣಿ ವಾಡಿಕೊಳ್ಳಬಹುದು ಎಂಬ ಮಾಹಿತಿ ನೀಡಿದರು.
ಜಿಲ್ಲಾ ತರಬೇತಿ ಕೇಂದದ ಪ್ರಾಚಾರ್ಯೆ ಡಾ.ರಜಿನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನ್ ದಾಸ್, ಡಾ.ಮಹಿವಾ, ಡಾ.ಸನತ್‌ಕುವಾರ್, ಡಾ.ಪುರುಷೋತ್ತಮ ಮತ್ತಿತರರು ಇದ್ದರು.