ಸಿಂಧನೂರಿನಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತ ಎಸ್ಪಿ ಎಂ.ಎನ್.ಶಶಿಧರ ಅವರು ಸಾರ್ವಜನಿಕ ಕುಂದು-ಕೊರತೆ ಅಹವಾಲು ಸ್ವೀಕರಿಸಿದರು. ತಹಸೀಲ್ದಾರ ಅರುಣ್ ಎಚ್.ದೇಸಾಯಿ, ತಾಪಂ ಇಒ ಚಂದ್ರಶೇಖರ ಇತರರಿದ್ದರು. 
ಜಿಲ್ಲೆ

ಆರ್‌ಟಿಐ ಅಡಿಯಲ್ಲಿ ದಾಖಲೆ ಒದಗಿಸಿ

ಪ್ರವೀಣ ಉದುಸಾ ದಲಬಂಜನ್

ಸಿಂಧನೂರು: ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತ ಎಸ್ಪಿ ಎಂ.ಎನ್.ಶಶಿಧರ ಅವರಿಗೆ ಸಾರ್ವಜನಿಕ ಕುಂದು-ಕೊರತೆಯ ಅಹವಾಲು ಸಲ್ಲಿಸಿದರು.

ಭೂ ವ್ಯಾಜ್ಯ, ಪೊಲೀಸ್ ಠಾಣೆಗಳಲ್ಲಿನ ಸಮಸ್ಯೆಗಳು, ಭೂ ಸರ್ವೇ ಪ್ರಕರಣಗಳು ಸೇರಿ ಜನತೆ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು. ನಗರಸಭೆಯಲ್ಲಿ ಅನಧಿಕೃತ ನಿವೇಶನಗಳಿಗೆ ನಿಯಮಬಾಹಿರವಾಗಿ ಫಾರ್ಮ್ ನಂ.3 ನೀಡಿರುವುದು ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಸರಿಯಾಗಿ ದಾಖಲೆ ಒದಗಿಸುತ್ತಿಲ್ಲವೆಂದು ವಕೀಲ ರಬ್ಬಾನಿ ಜಾಗೀರದಾರ ಲೋಕಾಯುಕ್ತರ ಗಮನಕ್ಕೆ ತಂದರು. ಬನಂತೆರ ನಗರಸಭೆ ಪೌರಾಯುಕ್ತ ಮಂಜುನಾಥ್ ಗುಂಡೂರು ಅವರಿಗೆ ಅಗತ್ಯ ದಾಖಲೆ ನೀಡಬೇಕು ಎಂದು ಸೂಚನೆ ನೀಡಿದರು. ಪ್ರತಿಕ್ರಿಯೆ ನೀಡಿದ ಮಂಜುನಾಥ ಗುಂಡೂರು, ಕಚೇರಿಯಲ್ಲಿರುವ ದಾಖಲೆಗಳೆಲ್ಲವೂ ಒದಗಿಸಲಾಗಿದೆ ಎಂದರು.

ತಹಸೀಲ್ದಾರ ಅರುಣ್ ಎಚ್.ದೇಸಾಯಿ, ತಾಪಂ ಇಒ ಚಂದ್ರಶೇಖರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.