ಗುಳೇದಗುಡ್ಡದಲ್ಲಿ ಆರ್‌ಎಸ್‌ಎಸ್ ವತಿಯಿಂದ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವದಲ್ಲಿ ವಿಜಯಪುರ ವಿಭಾಗ ಕಾರ್ಯಕಾರಣಿ ಸದಸ್ಯ ಸೋಮಲಿಂಗ ಕಣ್ಣೂರ ಮಾತನಾಡಿದರು. ಡಾ. ಸಿದ್ದಣ್ಣ ಮಡಿವಾಳರ ಇತರರಿದ್ದರು. 
ಜಿಲ್ಲೆ

ಹಿಂದುಗಳ ಒಗ್ಗೂಡಿಕೆಗೆ ಆರ್‌ಎಸ್‌ಎಸ್ ಜನನ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಸಕ್ತ ವರ್ಷ ವಿಜಯ ದಶಮಿಗೆ ನೂರು ವರ್ಷಪೂರ್ಣಗೊಂಡಿದೆ. ಹಿಂದುಗಳನ್ನು ಒಗ್ಗೂಡಿಸಲು ಡಾ. ಹೆಗ್ಗಡೆವಾರ ರಾಷ್ಟ್ರೀಯ ಸ್ವಯಂ ಸೇವಕ ಸ್ಥಾಪಿಸಿದರು. ಸಂಘವು ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ವಿಜಯಪುರ ವಿಭಾಗ ಕಾರ್ಯಕಾರಣಿ ಸದಸ್ಯ ಸೋಮಲಿಂಗ ಕಣ್ಣೂರ ಹೇಳಿದರು.

ಪಟ್ಟಣದ ವೆಂಕಟೇಶ ಕನ್ನಡ ಮಾಧ್ಯಮ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಜಯದಶಮಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

ಸಂಘವು ಯುಗಾದಿ, ಹಿಂದು ಸಾಮ್ರಾಜ್ಯೋತ್ಸವ, ಗುರು ಪೂರ್ಣಿಮೆ, ರಕ್ಷಾ ಬಂಧನ, ವಿಜಯದಶಮಿ, ಮಕರ ಸಂಕ್ರಾಮಣ ಹೀಗೆ ಆರು ಉತ್ಸವಗಳನ್ನು ಆಚರಿಸುತ್ತದೆ. ದೇಶ ಭಕ್ತಿ, ರಾಷ್ಟಾಭಿಮಾನ ಬೆಳೆಸುವಲ್ಲಿ ಸಂಘ ಸಾಕಷ್ಟು ಕೊಡುಗೆ ನೀಡಿದೆ. ಸಂಘದ ಹಲವಾರು ವರ್ಷಗಳ ಹೋರಾಟದ ಲವಾಗಿ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಯಿತು. ಸಾಕಷ್ಟು ಹೋರಾಟದಲ್ಲಿ ಸಂಘ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದೆ ಎಂದರು.

ಡಾ. ಸಿದ್ದಣ್ಣ ಮಡಿವಾಳರ ಉಪನ್ಯಾಸ ನೀಡಿದರು. ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಸಂಪತ್ತಕುಮಾರ ರಾಠಿ, ಮಲ್ಲಿಕಾರ್ಜುನ ಶೀಲವಂತ, ಕಮಲಕಿಶೋರ ಮಾಲಪಾಣಿ, ಸಂಗಣ್ಣ ಹುನಗುಂದ, ವಿಠ್ಠಲ ಪತ್ತಾರ, ಭುವನೇಶ ಪೂಜಾರ ಇತರರು ಇದ್ದರು.