ಕಲಬುರಗಿ: ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಭಾನುವಾರ ಸಂಜೆ 4ಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂದ ಪಥ ಸಂಚನಲಕ್ಕೆ ನಿರ್ಧರಿಸಿ, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ತಹಸೀಲ್ದಾರ್ 3.30ಕ್ಕೆ ನಿಷೇಧಾಜ್ಞೆ ಹೇರಿ, ಆದೇಶ ಹೊರಡಿಸಿದ್ದರು. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊನೇ ಕ್ಷಣದಲ್ಲಿ ರ್ನಿಬಂಧ ಹೇರಿದ್ದರೇ ಹೇಗೆ ಎಂದು ಪ್ರಶ್ನಿಸಿ, ಸ್ವಯಂ ಸೇವಕರು ಪಥ ಸಂಚಲನ ಆರಂಭಿಸಿದ್ದರು. ಸಂ ಸ್ಥಾನದಿಂದ ಸುಮಾರು 500 ಮೀಟರ್ ಸಾಗಿದ ಪಥ ಸಂಚಲನಕ್ಕೆ ಮಾರ್ಗ ಮಧ್ಯೆ ತಡೆದ ಪೊಲೀಸರು ನೂರಾರು ಸ್ವಯಂ ಸೇವಕರನ್ನು ವಶಕ್ಕೆ ಪಡೆದರು. ಈ ಮಧ್ಯೆಯೂ ನೂರಾರು ಸ್ವಯಂ ಸೇವಕರು ಪಥ ಸಂಚಲನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಪ್ರತಿಬಂದಕಾಜ್ನೆ: ಯಡ್ರಾಮಿ ತಾಲೂಕಿನ ಕುಮ್ಮನಸಿರಸಗಿ ಗ್ರಾಮದಲ್ಲಿ ಅ.19ರಂದು ಆರ್ಎಸ್ಎಸ್ ಪಥ ಸಂಚಲನ ನಿರ್ಧಾರವಾದ ಹಿನ್ನೆಲೆಯಲ್ಲಿ ಪ್ರತಿಭಂದಕಾಜ್ಞೆ ವಿಧಿಸಿ, ಯಡ್ರಾಮಿ ತಹಸೀಲ್ದಾರ್ ಆದೇಶ ಹೊರಡಿಸಿದ್ದರಿಂದ ಪಥಸಂಚನಲ ನಡೆಯಲಿಲ್ಲ. ಪಥಸಂಚಲನ ನಡೆದರೆ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂದು ನಿಷೇಧಿಸಲಾಗಿದೆ ಎಂದು ಆದೇಶಿಸಿದ್ದರು.