filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37; 
ಜಿಲ್ಲೆ

ಆರ್​ಎಸ್​ಎಸ್​ ನಿಸ್ವಾರ್ಥ ಸೇವೆ

ಎಂ.ಎಸ್​.ಹಿರೇಮಠ ಬೆಳಗಾವಿ

ತಲ್ಲೂರ: ನಿಸ್ವಾರ್ಥ ಮನೋಭಾವದಿಂದ ಸಂಟನಾತ್ಮಕವಾಗಿ ದೇಶಕ್ಕೆ ಸೇವೆ ಸಲ್ಲಿಸುವ ಜಗತ್ತಿನ ಏಕೆಕ ಸಂಟನೆ ರಾಷ್ಟ್ರೀಯ ಸ್ವಯಂ ಸೇವಕರ ಸಂ ಎಂದು ಮುಖ್ಯ ವಕ್ತಾರ ನರಸಿಂಹ ಕುಲಕರ್ಣಿ ಹೇಳಿದರು.

ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದ ಸಭಾಮಂಟಪದಲ್ಲಿ ಈಚೆಗೆ ಆರ್​ಎಸ್​ಎಸ್​ನ ನೂರು ವರ್ಷದ ಸಂಭ್ರಮಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ವಿಜಯ ದಶಮಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದುತ್ವ ರಣೆ ಮತ್ತು ಸಮಾಜದ ಏಕತೆಯ ಮೂಲಕ ಭಾರತಕ್ಕೆ ಜಾಗತಿಕ ಸ್ಥಾನಮಾನ ತಂದುಕೊಡುವ ದೂರದಷ್ಟಿ ಆರ್​ಎಸ್​ಎಸ್​ಗಿದೆ ಎಂದರು.

ಮುಖಂಡ ವಿಕ್ರಮಕುಮಾರ ದೇಸಾಯಿ ಮಾತನಾಡಿ, ಜಾತಿಬೇಧ ಮರೆತು ನಾವೆಲ್ಲ ಒಂದುಗೂಡುವುದೇ ನಮ್ಮ ರಾಷ್ಟ್ರದ ಅತಿ ದೊಡ್ಡ ಶಕ್ತಿ ಎಂದರು. ತೊರಗಲ್ಲಮಠದ ದೀಪಕಸ್ವಾಮಿ ಸಾನ್ನಿಧ್ಯ ವಹಿಸಿದ್ದರು, ಪ್ರಸನ್ನ ಶಾಸ್ರ್ತಿ, ಶಂಕರಗೌಡ ಪಾಟೀಲ, ಬಿ.ಬಿ.ಅಣ್ಣಿಗೇರಿ, ಸಂತೋಷ ವಾಲಿ, ಗೋವಿಂದ ಪೂಜೇರ, ಪ್ರವಿಣ ಬೆಣ್ಣಿ, ಮನೋಜ ತುಪ್ಪದ, ಸಂಕೇತ ದೇಸಾಯಿ, ಬಸು ನಾಯ್ಕರ ಸೇರಿ ತಾಲೂಕಿನ ಗಣವೇಷಧಾರಿಗಳಿದ್ದರು.