ಹುನಗುಂದ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ನಿಮಿತ್ತ ಆಕರ್ಷಕ ಪಥ ಸಂಚಲನ ನಡೆಯಿತು. 
ಜಿಲ್ಲೆ

ಹುನಗುಂದದಲ್ಲಿ ಗಮನಸೆಳೆದ ಆರ್.ಎಸ್.ಎಸ್ ಪಥಸಂಚಲನ

ದತ್ತಾತ್ರೇಯ ಪಿ ಕುಲಕರ್ಣಿ

ಹುನಗುಂದ: ಪಟ್ಟಣದ ಮುಖ್ಯ ಬೀದಿಗಳಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ನಿಮಿತ್ತ ಆಕರ್ಷಕ ಪಥ ಸಂಚಲನ ನಡೆಯಿತು.

ವಿಜಯ ಮಹಾಂತೇಶ ಹೈಸ್ಕೂಲ್‌ದಿಂದ ಆರಂಭವಾದ ಪಂಥ ಸಂಚಲನವು ಮರಿದೇವರ ಮಠ, ಹೊನ್ನಮ್ಮನಕೇರಿ, ಲಕ್ಷ್ಮೀದೇವಿ ದೇವಸ್ಥಾನ, ಲಿಂಗದ ಕಟ್ಟಿ, ಗಾಂಧೀ ವೃತ್ತ, ಸಂಗಮೇಶ್ವರ ದೇವಸ್ಥಾನ, ಸಂಗೊಳ್ಳಿರಾಯಣ್ಣ ವೃತ್ತ, ಡಾ. ಅಂಬೇಡ್ಕರ್ ನಗರ, ವಿಜಯ ಮಹಾಂತೇಶ ವೃತ್ತ ಮೂಲಕ ವಿಜಯ ಮಹಾಂತೇಶ ಶಾಲೆ ಆವರಣದಲ್ಲಿ ಸಮಾರೋಪ ಸಭೆ ನಡೆಯಿತು. ಪಥ ಸಂಚಲನದ ಉತ್ಸವದಲ್ಲಿ ದೇಶಭಕ್ತಿ ಗೀತೆಗಳು, ವಾದ್ಯ ಸಂಭ್ರಮ, ಜೈಘೋಷಣೆಗಳು ವಿಶೇಷವಾಗಿ ಪಥಸಂಚಲನದಲ್ಲಿ ಗಮನ ಸೆಳೆದವು.

ವಿವಿಧ ವೃತ್ತಗಳಲ್ಲಿ ಮಹಿಳೆಯರು ರಂಗೋಲಿ ಬಿಡಿಸಿದ್ದರು. ಗಣವೇಷಧಾರಿಗಳ ಮೇಲೆ ಸಾರ್ವಜನಿಕರು ಪುಷ್ಪವೃಷ್ಠಿಗೈದು ಸ್ವಾಗತಿಸಿದರು.
ಮಾಜಿ ಶಾಸಕ ದೊಡ್ಡನಗೌಡರ ಪಾಟೀಲ ತಮ್ಮ ಬೆಂಬಗಲಿಗರೊಂದಿಗೆ ವಿಜಯ ಮಹಾಂತೇಶ ವೃತ್ತಕ್ಕೆ ಆಗಮಿಸಿ ಸ್ವಯಂಸೇವಕರ ಪಥ ಸಂಚಲನಕ್ಕೆ ಪುಷ್ಪಾರ್ಪಣೆ ಮಾಡಿದರು.

ಡಾ. ಮಹಾಂತೇಶ ಕಡಪಟ್ಟಿ, ಮಲ್ಲಿಕಾರ್ಜುನ ಚೂರಿ, ಲಕ್ಷ್ಮಣ ಗಾಯಕವಾಡ, ಪ್ರವೀಣ ಹಳಪೇಟಿ, ಶಿವು ಭಾವಿಕಟ್ಟಿ, ವೀರಣ್ಣ ಬಂಡಿ, ಶ್ರೀನಿವಾಸ ಬಡಿಗೇರ ಮತ್ತಿತರರು ಗಣವೇಷ ಧರಿಸಿದ್ದರು. ವಿಜಯಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಪ್ರಭು ಹೂಗಾರ ಇದ್ದರು. ಹುನಗುಂದ ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಹುನಗುಂದ ಸಿಪಿಐ ಸುನೀಲ ಸವದಿ, ಹುನಗುಂದ ಪಿಎಸ್‌ಐ ಪ್ರಕಾಶ ಡಿ. ಸೇರಿ 120ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು.