ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಸುರೇಶ್ ಭಯ್ಯಾಜಿ ಜೋಶಿ ಶುಕ್ರವಾರ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ, ದೇವರದರ್ಶನ ಪಡೆದರು.
ಗೀತಾ ಮಂದಿರದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರನ್ನು ಭೇಟಿ ಮಾಡಿ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀಗಳು, ಬಾಂಗ್ಲಾ ದೇಶೀಯರ ಅಕ್ರಮ ನುಸುಳುಕೋರರ ಸಮಸ್ಯೆ, ಮಣಿಪುರದಲ್ಲಿ ಶಾಂತಿ ಸುರಕ್ಷತೆ , ವಕ್ಫ್ ಬೋರ್ಡಿನ ಅವಾಂತರಗಳು, ಕಾಶ್ಮೀರದ ಭಯೋತ್ಪಾದನೆ ಇತ್ಯಾದಿ ವಿಚಾರಗಳ ಬಗ್ಗೆ ಜೋಶಿಯವರೊಂದಿಗೆ ಸಮಾಲೋಚನೆ ನಡೆಸಿದರು. ಆಂತರಿಕ ಸಮಸ್ಯೆಗಳ ಪರಿಹಾರಕ್ಕೆ ಸಂಘದ ಕಾರ್ಯಗಳು, ಸಂಘದ ಶತಾಬ್ದಿಯ ಕಾರ್ಯಕ್ರಮಗಳು, ಮುಂದಿನದಿನಗಳಲ್ಲಿ ರಾಷ್ಟ್ರದ ಹಿತರಕ್ಷಣೆಯ ಕೆಲಸಗಳಲ್ಲಿ ಸಾಧು ಸಂತರು, ಮಠಾಧೀಶರು ವಹಿಸಬೇಕಾದ ಮಹತ್ವದ ಭೂಮಿಕೆಯ ಕುರಿತು ಭಯ್ಯಾಜಿ ವಿವರಿಸಿದರು. ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ , ಸುಧೀರ್ ಜಿ., ಗುರುನಾಥ್ ಉಪಸ್ಥಿತರಿದ್ದರು.