ಗುಳೇದಗುಡ್ಡ ಪಟ್ಟಣದಲ್ಲಿ ಆರ್‌ಎಸ್‌ಎಸ್ ವತಿಯಿಂದ ನಡೆದ ವಿಜಯದಶಮಿ ಉತ್ಸವದಲ್ಲಿ ಕರ್ನಾಟಕ ಉತ್ತರ ಪ್ರಾಂತ ಸಂಪರ್ಕ ಪ್ರಮುಖ ಸುಧೀರಸಿಂಗ್ ಘೋರ್ಪಡೆ ಮಾತನಾಡಿದರು. 
ಜಿಲ್ಲೆ

ಹಿಂದುಗಳಲ್ಲಿ ಆತ್ಮವಿಶ್ವಾಸ ತುಂಬಿದ ಆರ್‌ಎಸ್‌ಎಸ್

Vijayapura - Desk - Gurappa Lokuri

ಗುಳೇದಗುಡ್ಡ: ದೇಶಗಳ ನಡುವಿನ ಸಂಘರ್ಷ ನಿವಾರಣೆಗೆ ಇಂದು ಜಗತ್ತು ಭಾರತದತ್ತ ನೋಡುತ್ತಿದೆ ಎಂದು ಕರ್ನಾಟಕ ಉತ್ತರ ಪ್ರಾಂತ ಸಂಪರ್ಕ ಪ್ರಮುಖ ಸುಧೀರಸಿಂಗ್ ಘೋರ್ಪಡೆ ಹೇಳಿದರು.

ಪಟ್ಟಣದ ಭಂಡಾರಿ ಕಾಲೇಜಿನ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡ ವಿಜಯದಶಮಿ ಉತ್ಸವದಲ್ಲಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದುಗಳಲ್ಲಿ ಆತ್ಮವಿಶ್ವಾಸ ತುಂಬಿ ಸಮಾಜ ಹಾಗೂ ದೇಶ ಶಕ್ತಿಶಾಲಿಯಾಗಿಸಬೇಕು ಎಂಬ ಉದ್ದೇಶ ಹೊಂದಿದೆ ಎಂದರು.

ಸಂಶೋಧಕ, ಕೃಷಿ ಪಂಡಿತ ಡಾ.ಸಂಗಪ್ಪ ನಾರಾ ಮಾತನಾಡಿ, ದೇಶದಲ್ಲಿ ಪ್ರಕೃತಿ ವಿಕೋಪಗಳು ಉಂಟಾದಲ್ಲಿ ಅಲ್ಲಿಗೆ ಮೊದಲು ತಲುಪವವರು ರಾಷ್ಟ್ರೀಯ ಸ್ವಯಂ ಸೇವಕರು. ಸಮಾಜ ಸೇವೆಯೇ ಈಶ ಸೇವೆ ಎಂದು ಸಂಘದ ಕಾರ್ಯಕರ್ತರು ತಿಳಿದುಕೊಂಡಿದ್ದಾರೆ. ಸಂಘದ ಕಾರ್ಯಕರ್ತನಾಗುವುದು ಹೆಮ್ಮೆಯ ಸಂಗತಿ ಎಂದರು. ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಈರಣ್ಣ ಕಂಠಿ, ಪೋಲಿಸಪ್ಪ ರಾಮದುರ್ಗ, ಬಸವರಾಜ ಕುಂಬಾರ, ಈರಣ್ಣ ಬಂಡಿ, ವಿಠ್ಠಲ ಪತ್ತಾರ, ವಿವೇಕಾನಂದ ದೇವಂಗಮಠ, ಮಧುದುಸೂದನ ರಾಂದಡ, ಸಂಪತ್ ರಾಠಿ, ಮಲ್ಲಿಕಾರ್ಜುನ ಶೀಲವಂತ, ಸಂಗಣ್ಣ ಹುನಗುಂದ, ಕಮಲಕಿಶೋರ ಮಾಲಪಾಣಿ, ಮಹಾಗುಂಡಪ್ಪ ಹಾನಾಪೂರ, ಶಿವಾನಂದ ಜವಳಿ, ಗುಂಡುಭಟ್ ಜೋಶಿ, ಪ್ರವೀಣ ದೇವಗಿರಿಕರ, ಮಲ್ಲು ಮುರನಾಳ, ಪ್ರಕಾಶ ರೋಜಿ, ಅತ್ರೇಶ ದೊಡಮನಿ, ಶಿವಕುಮಾರ ಅಚನೂರ, ಭುವನ ಪೂಜಾರಿ, ಮಹೇಶ ಸೂಳಿಭಾವಿ, ಶಂಕರ ಕಾಟವಾ ಮತ್ತಿತರರು ಇದ್ದರು.

ವಿಜಯದಶಮಿ ಉತ್ಸವ ಅಧರ್ಮದ ವಿರುದ್ಧ ಧರ್ಮದ ಜಯದ ಸಂಕೇತ. ತಾಯಿ ಅವತಾರವೆತ್ತಿ ರಕ್ಕಸರನ್ನು ಸಂಹರಿಸಿ ಧರ್ಮವನ್ನು ರಕ್ಷಿಸಿದ್ದು ಈ ಆಚರಣೆಯ ಮಹತ್ವವಾಗಿದೆ. ಇದು ಶಕ್ತಿಯ ಆರಾಧನೆ.
ಸುಧೀರಸಿಂಗ್ ಘೋರ್ಪಡೆ, ಕರ್ನಾಟಕ ಉತ್ತರ ಪ್ರಾಂತ ಸಂಪರ್ಕ ಪ್ರಮುಖ