ಜಿಲ್ಲೆ

ಚಿತ್ತಾಪುರ ಪಥಸಂಚಲನ: ಶಾಂತಿಸಭೆಗೆ ಅರ್ಜಿದಾರ ಗೈರು, ನ.5ರಂದು ಪುನಃ ಸಭೆ, ನ.7ರಂದು ವಿಚಾರಣೆ

ರಮೇಶ ಮೇಳಕುಂದಾ

ಕಲಬುರಗಿ: ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ಪ್ರಕರಣದ ಶಾಂತಿ ಸಭೆಗೆ ಪ್ರಮುಖ ಅರ್ಜಿದಾರ ಆರೆಸ್ಸೆಸ್ ನ ಅಶೋಕ ಪಾಟೀಲ್ ಗೈರು ಆಗಿದ್ದಕ್ಕೆ ಆಕ್ಷೇಪಿಸಿದ ಹೈಕೋರ್ಟ್, ಬೆಂಗಳೂರಿನಲ್ಲಿ ನ.5ರಂದು ಸಭೆ ನಡೆಸಿ, ವರದಿ ಪಡೆದು ನ.7ರಂದು ವಿಚಾರಣೆಗೆ ಬರುವಂತೆ ಸೂಚನೆ ನೀಡಿತು.

ಜಿಲ್ಲಾಡಳಿತಕ್ಕೆ ಸಹಕಾರ ನೀಡುವಂತೆ ಸೂಚನೆ ನೀಡಿತು. ಪುನಃ ಜಿಲ್ಲಾಡಳಿತ, ಎಜಿ ಮತ್ತು ದೂರುದಾರ ವಕೀಲರು ಸಭೆ ನಡೆಸಿ, ವರದಿ ತರುವಂತೆ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಸೂಚನೆ ನೀಡಿದರು.

ಆರೆಸ್ಸೆಸ್ ಪರ ಅರ್ಜಿದಾರರ ಅಶೋಕ ಪಾಟೀಲ್ ಶಾಂತಿ ಸಭೆಗೆ ಗೈರಾಗಿದ್ದಕ್ಕೆ ಹೈಕೋರ್ಟ್ ಆಕ್ಷೇಪಿಸಿತು. ಇದಕ್ಕೆ ಆರೆಸ್ಸೆಸ್ ವಕೀಲ ಅರುಣ ಶಾಮ್, ಸಮಗ್ರ ಮಾಹಿತಿ ನೀಡಲಾಗಿದೆ. ಅವಕಾಶ ನೀಡಿ ಎಂದು ಕೇಳಿಕೊಂಡರು. ಇದಕ್ಕೆ ಆಕ್ಷೇಪಿಸಿದ ಎಜಿ ಶಶಿಕಿರಣ ಶೆಟ್ಟಿ, ಅರ್ಜಿದಾರರೇ ಗೈರಾಗಿದ್ದು, ಮತ್ತೊಮ್ಮೆ ಅವರು ಹಾಜರಾಗಿ ದಾಖಲೆ ಸಲ್ಲಿಸಿ, ನಿರ್ಧಾರ ಕೈಗೊಳ್ಳಲು ಅವಕಾಶ ಕೋರಿದರು.

ಸಭೆಯಲ್ಲಿ ಜಿಲ್ಲಾಡಳಿತ, ಎಜಿ ಮತ್ತು ಆರೆಸ್ಸೆಸ್ ಪರ ವಕೀಲರು, ಅರ್ಜಿದಾರ ಭಾಗವಹಿಸಿ, ಸಭೆ ನಡೆಸಿ, ನಿರ್ಣಯಕ್ಕೆ ಬರಬೇಕು ಎಂದು ಹೈಕೋರ್ಟ್ ಪೀಠ ನಿರ್ದೇಶನ ನೀಡಿತು.