ಗದಗ: ಅಯೋಧ್ಯಾದಲ್ಲಿ ಇದೇ ಜ. ೨೨ ರಂದು ನಡೆಯಲಿರುವ ಶ್ರೀರಾಮ ಮಂದಿರ ಲೋಕಾರ್ಪಣೆಯ ಐತಿಹಾಸಿಕ ಕಾರ್ಯಕ್ರಮವನ್ನು ಎಲ್ಲರೂ ಕಣ್ತುಂಬಿಕೊಳ್ಳೋಣ ಎಂದು ಆರ್‌ಎಸ್‌ಎಸ್‌ನ ಪ್ರಮುಖರಾದ ಅರುಣ ಜಿ. ಅವರು ಹೇಳಿದರು.
ನಗರದ ೩೧ ನೇ ವಾರ್ಡಿನ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪಾಂಡುರAಗ ವಿಠ್ಠಲ್- ರುಕ್ಮಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಆಯೋಧ್ಯೆಯಿಂದ ಬಂದAತಹ ಮಂತ್ರಾಕ್ಷತೆ ಹಾಗೂ ಕರಪತ್ರವನ್ನು ಮನೆ ಮನೆಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮಂತ್ರಾಕ್ಷತೆ, ಕರಪತ್ರ ಹಾಗೂ ಕೇಸರಿ ಧ್ವಜವನ್ನು ಎಲ್ಲರೂ ಮನೆ ಮನೆಗೆ ಮುಟ್ಟಿಸಬೇಕು ಮತ್ತು ಅಂದು ನಡೆಯುವ ಐತಿಹಾಸಿಕ ಕಾರ್ಯಕ್ರಮವನ್ನು ಎಲ್ಲರೂ ಕಣ್ತುಂಬಿಕೊಳ್ಳುವAತೆ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಶೈಲಾ ಬಾಕಳೆ, ಹಿರಿಯರಾದ ಪರಶುರಾಮಸಾ ಬದಿ, ಲೋಕನಾಥಸಾ ಬದಿ, ಕೃಷ್ಣಸಾ ಲದ್ವಾ, ನಂದು ಬೇವಿನಕಟ್ಟಿ, ನಗರಸಭೆ ಮಾಜಿ ಸದಸ್ಯೆ ಯಲ್ಲೂಬಾಯಿ ನಿರಂಜನ, ಯುವ ಮುಖಂಡರಾದ ಶ್ರೀಕಾಂತ ಬಾಕಳೆ, ಸುಧೀರ ಕಾಟಿಗರ, ಪರಶುರಾಮ ಮಿಸ್ಕಿನ್, ಸುನಿಲ್ ಮಾನ್ವಿ, ಸುಮಂತ ಪಾಟೀಲ, ನಾಗರಾಜ ಖೋಡೆ, ಶ್ರೀಕಾಂತ ಪವಾರ, ರಾಜೇಶ್ ಖೋಡೆ, ಸುರೇಶ ಲದ್ವಾ, ಪ್ರಕಾಶ ಕಾಟಿಗರ, ಸುನಿಲ್ ಬಸವಾ, ಸರೋಜಾಬಾಯಿ ಶೇಜವಾಡಕರ, ಶೋಭಾ ಬಾಂಡಗೆ ಸೇರಿದಂತೆ ೩೧ ನೇ ವಾರ್ಡಿನ ಜನರು ಉಪಸ್ಥಿತರಿದ್ದರು.