ಜಿಲ್ಲೆ

ಹೈನೋದ್ಯಮ, ಕುರಿ ಸಾಕಾಣಿಕೆಯಿಂದ ಲಾಭ : ಗೊಂಡಬಾಳ

Kopala - Raveendra V K

ಕೊಪ್ಪಳ: ಕೃಷಿಕರು ತಮ್ಮ ಮೂಲ ಕಸುಬಿನೊಂದಿಗೆ ಹೈನೋದ್ಯಮ ಮತ್ತು ಕುರಿ ಸಾಕಣೆ ಉಪ ಕಸುಬುಗಳಿಂದ ಲಾಭ ಗಳಿಸಲು ಸಾಧ್ಯ ಎಂದು ಉದ್ಯಮ ತರಬೇತುದಾರ ಮಂಜುನಾಥ ಗೊಂಡಬಾಳ ಹೇಳಿದರು.

ನಗರದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ"ಹೈನೋದ್ಯಮ ಮತ್ತು ಕುರಿ ಸಾಕಣೆ ಹಾಗೂ ಎರೆಹುಳು ಗೊಬ್ಬರ ತಯಾರಿಕೆ' ಕುರಿತ ಹತ್ತು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿಕರು ಕೇವಲ ವಾರ್ಷಿಕ ಬೆಳೆಗಳ ಮೇಲೆ ಅವಲಂಬನೆಯಾಗದಿರಿ. ಹೈನೋದ್ಯಮ ಮತ್ತು ಕುರಿ, ಎರೆಹುಳು ಗೊಬ್ಬರ, ಮೀನು ಹಾಗೂ ಕೋಳಿ ಸಾಕಣೆಯಿಂದ ಆದಾಯ ವೃದ್ಧಿಸಿಕೊಳ್ಳಬಹುದು. ಯಾವುದೇ ಉದ್ಯೋಗ ಸಮಯ ಮತ್ತು ಪ್ರಯತ್ನ ಬಯಸುತ್ತದೆ. ಹೊಸ ಕೆಲಸದಲ್ಲಿ ಆರ್ಥಿಕ ಅಪಾಯಗಳು ಇರುತ್ತವೆ. ಆದರೆ ಬೆಳೆಯಬೇಕೆಂಬ ಮನುಷ್ಯನಿಗೆ ಅಂತಹ ಅಪಾಯದ ಭಯ ಇರಬಾರದು. ಪ್ರಯತ್ನ ಮತ್ತು ವಿಶ್ವಾಸದಿಂದ ಗೆಲುವು ಸಾಧ್ಯ ಎಂದರು.

ಈ ನಾಲ್ಕು ಬಗೆಯ ಉಪ ಕಸುಬು ಆರಂಭಿಸಲು ಇರುವ ಆರ್ಥಿಕ ಸಹಾಯ ಧನ, ಹಣಕಾಸಿನ ನೆರವು ಮತ್ತು ಯೋಜನೆಯ ಕುರಿತು ತರಬೇತಿ ನೀಡಲಾಯಿತು. ಆರ್ಸೆಟಿ ತರಬೇತಿ ಕೇಂದ್ರ ಉಪನ್ಯಾಸಕಿ ಗೀತಾ ಬೋಲಾ, ವಿಜಯಲಕ್ಷಿ$್ಮ ಇದ್ದರು.