oplus_0 
ಜಿಲ್ಲೆ

ತಡೆಗೋಡೆಗೆ 9 ಕೋಟಿ ರೂ. ಅನುದಾನ ಮಂಜೂರು

ಎಂ.ಎಸ್​.ಹಿರೇಮಠ ಬೆಳಗಾವಿ

ರಾಮದುರ್ಗ: ತಾಲೂಕಿನ ಗೊಣ್ಣಾಗರ ಗ್ರಾಮದ ಹತ್ತಿರ ಮಲಪ್ರಭಾ ನದಿ ಪಥ ಬದಲಿಸಿದ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಲು ಸರ್ಕಾರದಿಂದ 9 ಕೋಟಿ ರೂ.ಅನುದಾನ ಮಂಜೂರಾಗಿದ್ದು, ಶ್ರೀದಲ್ಲಿ ಟೆಂಡರ್​ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ಗೊಣ್ಣಾಗರ ಗ್ರಾಮದಲ್ಲಿ ಹೊನ್ನೆತ್ತೆವ್ವ ಹಾಗೂ ದುರ್ಗಮ್ಮ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವದ್ಧಿ ಅನುದಾನದಲ್ಲಿ ಮಂಜೂರಾದ 10 ಲ ರೂ.ವೆಚ್ಚದ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮಸ್ಥರು ಮುಂದು ನಿಂತು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು. ಗ್ರಾಮದಲ್ಲಿ ಇನ್ನೇನಾದರೂ ಅಭಿವದ್ಧಿ ಕೆಲಸ ಮಾಡಬೇಕಿದ್ದರೆ ತಮ್ಮ ಗಮನಕ್ಕೆ ತಂದರೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.

ಜಿಪಂ ಮಾಜಿ ಉಪಾಧ್ಯ ಪರಪ್ಪ ಜಂಗವಾಡ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಜಿ.ಬಿ. ರಂಗನಗೌಡ್ರ, ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಗ್ರಾಮದ ಮುಖಂಡರಾದ ಪರಪ್ಪ ಮೇಟಿ, ಶಿವರಾಯಪ್ಪ ಕೇರಿ, ನಿಂಗನಗೌಡ ಈರನಗೌಡ್ರ, ಬಸಪ್ಪ ತಳವಾರ, ನಿಂಗಯ್ಯ ಹಿರೇಮಠ, ಉಮೇಶ ತಳವಾರ, ಪಡಿಯಪ್ಪ ಮಾದರ, ಪೊಲೀಸಗೌಡ ಪಾಟೀಲ, ಲ್ಯಾಂಡ್​ ಆರ್ಮಿ ಅಭಿಯಂತ ಬಿ.ಬಿ. ಪಾಟೀಲ ಇತರರಿದ್ದರು.