ಮೈಸೂರು: ಸಿಬಿಐ ಅಧಿಕಾರಿ ಎಂದು ಕರೆ ಮಾಡಿದ ವಂಚಕನೊಬ್ಬನಿಗೆ ನಗರದ ವೃದ್ಧರೊಬ್ಬರು 7 ಲಕ್ಷ ರೂ. ನೀಡಿ ವಂಚನೆಗೆ ಒಳಗಾಗಿದ್ದಾರೆ.
‘ನನ್ನ ನಂಬರಿಗೆ ಸಿಬಿಐ ಅಧಿಕಾರಿ ಎಂದು ಕರೆ ಮಾಡಿದ ವ್ಯಕ್ತಿಯೊಬ್ಬ ನಿಮ್ಮ ಹೆಸರಿನಲ್ಲಿ ಸಿಮ್ ಪಡೆದಿರುವ ವ್ಯಕ್ತಿಯೊಬ್ಬ ಮಾನವ ಕಳ್ಳ ಸಾಗಾಣಿಕೆಯಲ್ಲಿ ಭಾಗಿಯಾಗಿದ್ದು, ನೀವು ಕೂಡ ಈ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಪ್ರಕರಣದಿಂದ ನಿಮ್ಮನ್ನು ಕೈ ಬಿಡಬೇಕಾದರೆ 7 ಲಕ್ಷ ರೂ. ನೀಡಬೇಕು ಎಂದು ಒತ್ತಡ ಹೇರಿದ. ಭಯದಿಂದ ನಾನು 7 ಲಕ್ಷ ರೂ. ಕಳುಹಿಸಿದೆ. ನಂತರ ವಂಚನೆಯಾಗಿರುವುದು ತಿಳಿದು ಬಂತು’ ಎಂದು ವಂಚನೆಗೊಳಗಾದ ವೃದ್ಧ ದೂರು ನೀಡಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.