ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಕಳೆದ ಆರ್ಥಿಕ ಸಾಲಿನಲ್ಲಿ 60.70 ಲಕ್ಷ ರೂಪಾಯಿ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಜಿ.ಎನ್. ಹೆಗಡೆ ಹೀರೇಸರ ಹೇಳಿದರು.
ಸಂಘದ ಆವಾರದಲ್ಲಿ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉತ್ತಮ ಗ್ರಾಹಕರಾದ ಎಸ್.ಟಿ. ಭಟ್ಟ, ಮಧುಕೇಶ್ವರ ಭಟ್ಟ ಹರಿಗದ್ದೆ, ಸತ್ಯನಾರಾಯಣ ನಾಯ್ಕ ಉಚಗೇರಿ ಹಾಗೂ ಯುವ ಯಕ್ಷಗಾನ ಕಲಾವಿದ ದೀಪಕ ಕುಂಕಿ ಅವರನ್ನು ಪುರಸ್ಕರಿಸಲಾಯಿತು. 36 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, 4 ವ್ಯಕ್ತಿಗಳಿಗೆ ಅನುಕಂಪ ಪರಿಹಾರ ನಿಧಿ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ಟ, ನಿರ್ದೇಕರಾದ ಆರ್.ಎಲ್. ಭಟ್ಟ, ರವಿ ಹೆಗಡೆ ಹೀರೇಸರ, ಕೆ.ವಿ. ಭಟ್ಟ, ಶಿವರಾಮ ಶಾಸ್ತ್ರಿ, ಕೆ.ಎಸ್. ಭಟ್ಟ ಆನಗೋಡ, ಬಾಲಕೃಷ್ಣ ಭಟ್ಟ, ವಸುಮತಿ ಹೆಗಡೆ, ಶಕುಂತಲಾ ಹೆಗಡೆ, ವೆಂಕಟರಮಣ ಭಟ್ಟ, ಬೀರಪ್ಪ ನಾಯ್ಕ, ಮುಖ್ಯಕಾರ್ಯನಿರ್ವಾಹಕ ಗೋಪಾಲಕೃಷ್ಣ ಹೆಗಡೆ ಇತರರಿದ್ದರು. ಸಿ.ಎಸ್. ಪತ್ರೆಕರ್ ನಿರ್ವಹಿಸಿದರು.