ಮೃತನ ಕುಟುಂಬಕ್ಕೆ ಜಮಖಂಡಿಯ ತಹಸಿಲ್ದಾರ ಸದಾಶಿವ್ ಮುಕ್ಕೋಜಿ ಹಾಗೂ ಶಾಸಕರಾದ ಜಗದೀಶ್ ಗುಡಗುಂಟಿ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಿಸಿದರು. ಉಪ ತಹಸೀಲ್ದಾರ್ ಪ್ರಕಾಶ್ ಪವಾರ, ಬಿ.ಎಸ್. ಸಿಂಧೂರ, ಸುರೇಶಗೌಡ ಪಾಟೀಲ, ಅಜಯ ಕಡಪಟ್ಟಿ, ಈರಪ್ಪ ಸಿಂಧೂರ, ಬಸವರಾಜ ಪಾಟೀಲ, ಅಪ್ಪಸಾಬ ಬಿರಾದಾರ ಇತರರಿದ್ದಾರೆ. 
ಜಿಲ್ಲೆ

5 ಲಕ್ಷ ರೂ. ಪರಿಹಾರ ವಿತರಣೆ

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ: ತಾಲೂಕಿನ ತುಬಚಿ ಗ್ರಾಮದಲ್ಲಿ ನವಂಬರ್ 15ರಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪ್ರಥಮೇಶ ಪಾಟೀಲ ಅವರು ಸಿಡಿಲು ಬಡಿದು ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ವಿಪತ್ತು ಪರಿಹಾರ ನಿಧಿಯಿಂದ 5 ಲಕ್ಷ ರೂ. ಚೆಕ್ಕನ್ನು ಜಮಖಂಡಿ ತಹಸೀಲ್ದಾರ್ ಸದಾಶಿವ ಮುಕ್ಕೋಜಿ ಹಾಗೂ ಶಾಸಕ ಜಗದೀಶ್ ಗುಡಗುಂಟಿ ವಿತರಿಸಿದರು.

ಉಪತಹಸೀಲ್ದಾರ್ ಪ್ರಕಾಶ್ ಪವಾರ, ಬಿ.ಎಸ್. ಸಿಂಧೂರ, ಸುರೇಶಗೌಡ ಪಾಟೀಲ, ಅಜಯ ಕಡಪಟ್ಟಿ, ಈರಪ್ಪ ಸಿಂಧೂರ, ಬಸವರಾಜ ಪಾಟೀಲ, ಅಪ್ಪಸಾಬ ಬಿರಾದಾರ, ಮಹಾದೇವ ಬ್ಯಾಡಗಿ, ವಿನಯ ಪಾಟೀಲ, ಶಿವಲಿಂಗಪ್ಪ ಕುಂಬಾರ, ಅಮಿತ ಪಾಟೀಲ, ಹನಮಂತ ಕುಂಬಾರ, ಬಾಳು ಶೇಗಾಂವಿ ಮತ್ತಿತರರಿದ್ದರು.