raichur 
ಜಿಲ್ಲೆ

ರಾಯರ ಹುಂಡಿಗೆ 5.46 ಕೋಟಿ ರೂ.ಸಂಗ್ರಹ

ರಾಯಚೂರು ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಹುಂಡಿ ಎಣಿಕೆ ಕಾರ್ಯ ಮಂಗಳವಾರ ಪೂರ್ಣಗೊಂಡಿದ್ದು ಕಳೆದ 35 ದಿನಗಳಲ್ಲಿ ಒಟ್ಟು 5.46 ಕೋಟಿ ರೂಪಾಯಿ ಭಕ್ತರಿಂದ ಕಾಣಿಕೆ ಸಂಗ್ರಹವಾಗಿದೆ.

ಶ್ರೀಮಠದಲ್ಲಿ ಭಕ್ತರು ಹಾಗೂ ಸಿಬ್ಬಂದಿಗಳು ಬೆಳಗ್ಗೆಯಿಂದ ಕಾಣಿಕೆ ಎಣಿಕೆ ಕಾರ್ಯ ಆರಂಭಿಸಿ ಸಂಜೆ ಪೂರ್ಣಗೊಳಿಸಿದ್ದಾರೆ. ಈ ಪೈಕಿ 5.30 ಕೋಟಿ ರೂ.ಮೌಲ್ಯದ ನೋಟುಗಳು, 15.14 ಲಕ್ಷದ ನಾಣ್ಯಗಳು, 127 ಗ್ರಾಂ ಚಿನ್ನಾಭರಣ, 1820 ಗ್ರಾಂ ಬೆಳ್ಳಿ ಆಭರಣಗಳು ಕಾಣಿಕೆ ಬಂದಿವೆ ಎಂದು ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.