ಜಿಲ್ಲೆ

ಹಾಲಾಡಿ ದೇವಳ ಜೀರ್ಣೋದ್ಧಾರಕ್ಕೆ 3 ಲಕ್ಷ ರೂ. ಹಸ್ತಾಂತರ

ವಿಜಯವಾಣಿ ಸುದ್ದಿಜಾಲ ಹಾಲಾಡಿ

ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 3 ಲಕ್ಷ ರೂಪಾಯಿ ಮೊತ್ತದ ಡಿಡಿಯನ್ನು ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ನಾರಾಯಣ ಪಾಲನ್ ಅವರು ದೇವಾಲಯದ ಆಡಳಿತ ಮಂಡಳಿ ಸದಸ್ಯರಿಗೆ ಹಸ್ತಾಂತರಿಸಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಜೋಯಸ ತಟ್ಟವಟ್ಟು, ಸಮಿತಿ ಸದಸ್ಯರಾದ ಹಾಲಾಡಿ ಸರ್ವೋತ್ತಮ ಹೆಗ್ಡೆ, ಜಗನ್ನಾಥ ಶೆಟ್ಟಿ ಚಿಟ್ಟೆಬೈಲು, ಹಾಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಚೋರಾಡಿ, ಉಪಾಧ್ಯಕ್ಷೆ ಅನುರಾಧಾ ಪಿ.ಶೆಟ್ಟಿ, ಸದಸ್ಯರಾದ ಗುರುಪ್ರಸಾದ್ ಶೆಟ್ಟಿ, ಜನಾರ್ದನ್ ಹಾಲಾಡಿ, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ ಗೈನಾಡಿ, ಸಂಪತ್ ಕುವಾರ್ ಶೆಟ್ಟಿ, ಮಂಜುನಾಥ ರಾವ್ ಹಾಲಾಡಿ, ಅರ್ಚಕರಾದ ಭಾಸ್ಕರ್ ಅಡಿಗ, ರಾಜ್‌ಗೋಪಾಲ್ ಅಡಿಗ, ಜನಜಾಗೃತಿ ಸದಸ್ಯ ಸೂರ್ಯಪ್ರಕಾಶ್ ದಾಮ್ಲೆ, ವಲಯ ಮೇಲ್ವಿಚಾರಕಿ ಕವಿತಾ, ಕೃಷಿ ಮೇಲ್ವಿಚಾರಕ ಪ್ರದೀಪ್ ಕುವಾರ್, ಸೇವಾ ಪ್ರತಿನಿಧಿ ಜ್ಯೋತಿ ಉಪಸ್ಥಿತರಿದ್ದರು.