ರಾಯಬಾಗ: ಜನರ ಆಶಯದಂತೆ ಕ್ಷೇತ್ರದ ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಪ್ರಯತ್ನದಿಂದ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ತಾಲೂಕಿನ ಭೆಂಡವಾಡ, ರಾಯಬಾಗ ಮತ್ತು ಜಲಾಲಪುರ ಗ್ರಾಮಗಳಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, 4.30 ಕೋಟಿ ರೂ. ಅನುದಾನದಲ್ಲಿ ಭೆಂಡವಾಡ-ಮೇಖಳಿ ರಸ್ತೆ, ರಸ್ತೆ ವಿಸ್ತರಣೆ, ವಿದ್ಯುತ್ ದೀಪ ಅಳವಡಿಕೆ, 70 ಲಕ್ಷ ರೂ. ಅನುದಾನದಲ್ಲಿ ಮಂಟೂರ-ಕಟಕಬಾವಿ- ದೇವಾಪುರಹಟ್ಟಿ ರಸ್ತೆ, 12 ಕೋಟಿ ರೂ. ಅನುದಾನದಲ್ಲಿ ರಾಯಬಾಗ-ಕಂಕಣವಾಡಿ ರಸ್ತೆ, ಅಗಲೀಕರಣ ಹಾಗೂ ಜಲಾಲಪುರ ಗ್ರಾಮದಲ್ಲಿ 3 ಕೋಟಿ ರೂ. ಅನುದಾನದಲ್ಲಿ ಭಿರಡಿ-ಬಾವನಸೌಂದತ್ತಿ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಬೀದಿದೀಪ ಅಳವಡಿಸಲಾಗುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಗ್ರಾಪಂ ಅಧ್ಯಕ್ಷೆ ಅನಿತಾ ದುಪದಾಳೆ, ಪಪಂ ಅಧ್ಯಕ್ಷ ಅಶೋಕ ಅಂಗಡಿ, ಜಲಾಲಪುರ ಗ್ರಾಪಂ ಅಧ್ಯಕ್ಷೆ ದೀಪಾ ಚೌಗಲಾ, ಪಿಡಬ್ಲ್ಯುಡಿ ಎಇಇ ಆರ್.ಬಿ.ಮನವಡ್ಡರ, ಸದಾಶಿವ ಘೋರ್ಪಡೆ, ಸಿದ್ರಾಮ ಪೂಜಾರಿ, ಶಿವನಗೌಡ ಪಾಟೀಲ, ಸಿದ್ದು ಬಂಡಗರ, ರಾಜು ಶಿರಗಾಂವೆ, ಸುರೇಶ ಚೌಗಲಾ, ರಾಜು ಜಗದಾಳೆ, ನಾಮದೇವ ಕಾಂಬಳೆ, ಬಸವರಾಜ ಅವ್ವನ್ನವರ, ನಿರ್ಮಲಾ ಪಾಟೀಲ, ಅರ್ಜುನ ನಾಯಿಕವಾಡಿ, ಅರ್ಜುನ ಬಂಡಗಾರ, ಅಣ್ಣಾಸಾಹೇಬ ಸಮಾಜೆ, ವಿವೇಕ ಹಟ್ಟಿಕರ, ರಿಯಾನ್ ನದಾ ಇತರರಿದ್ದರು.