ಎನ್.ಆರ್.ಪುರ: ತಾಲೂಕಿನ ಸೀತೂರು ಹರಿದ್ವರ್ಣ ಗ್ರಾಮ ಅರಣ್ಯ ಸಮಿತಿಗೆ ಅರಣ್ಯ ಇಲಾಖೆಯಿಂದ ಬರಬೇಕಾದ ಎರಡು ಎಕರೆ ಪ್ಲಾಂಟೇಶನ್ ಮೊತ್ತ 18.68 ಲಕ್ಷ ರೂ. ಬಂದಿದೆ ಎಂದು ಸೀತೂರು ಹರಿದ್ವರ್ಣ ಗ್ರಾಮಅರಣ್ಯ ಸಮಿತಿ ಅಧ್ಯಕ್ಷ ಎನ್.ಪಿ.ರವಿ ಹೇಳಿದರು.
ಸೀತೂರಿನ ಹರಿದ್ವರ್ಣ ಗ್ರಾಮಅರಣ್ಯ ಸಮಿತಿ ಕುಟೀರದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಮಾತನಾಡಿ, ಕಮಾಲಾಪುರ ಅಕೇಶಿಯಾ ಪ್ಲಾಂಟೇಶನ್ ಹಾಗೂ ಸೀತೂರು ಅಕೇಶಿಯ ಪ್ಲಾಂಟೇಶನ್ ಕಡಿತದ ಶೇ.50ರಷ್ಟು ಹಣವನ್ನು ಅರಣ್ಯಇಲಾಖೆ ಬಿಡುಗಡೆ ಮಾಡಿದೆ. ಇನ್ನೂ 5 ಪ್ಲಾಂಟೇಶನ್ ಕಡಿತಲೆ ಬಾಕಿ ನಮ್ಮ ಗ್ರಾಮ ಅರಣ್ಯ ಸಮಿತಿಗೆ ಬರಬೇಕಿದೆ ಎಂದರು.
ಅರಣ್ಯ ಇಲಾಖೆಯಿಂದ ಬಂದ ಹಣದಲ್ಲಿ ಸೀತೂರು ಗ್ರಾಮದಲ್ಲಿ ಈ ಹಿಂದೆ ನಿರ್ಮಿಸಿದ್ದ ಶವಗಾರ ದುರಸ್ತಿ ಮಾಡಿಸಲು ಸಭೆ ತೀರ್ಮಾನಿಸಿತು. ಸೀತೂರು ಹಾಗೂ ಕಮಲಾಪುರ ಗ್ರಾಮದಲ್ಲಿ ಹೊಸದಾಗಿ ಎರಡು ಕುಟೀರ ನಿರ್ಮಿಸುವುದು. ಅಬ್ಬಿಗುಂಡಿ ಜಲಪಾತ ಅಭಿವೃದ್ಧಿ ಪಡಿಸುವುದು ಹಾಗೂ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ವೈಯ್ಯಕ್ತಿಕ ಸವಲತ್ತು ನೀಡಲು ಸಭೆ ತೀರ್ಮಾನಿಸಿತು.
ಹರಿದ್ವರ್ಣ ಗ್ರಾಮಅರಣ್ಯ ಸಮಿತಿ ಕಾರ್ಯದರ್ಶಿ ಈಶ್ವರ್, ಗ್ರಾಪಂ ಸದಸ್ಯ ಉಪೇಂದ್ರ, ಸಮಿತಿ ಸದಸ್ಯರಾದ ಎಸ್.ಡಿ.ವಿ.ಗೋಪಾಲರಾವ್, ಎ.ಎಸ್.ವೆಂಕಟರಮಣ, ನಾಗೇಶ್, ಕುಸುಮ, ಕವಿತ, ಅನ್ನಪೂರ್ಣ, ರಮೇಶ್, ವೈ.ಜಿ.ಸಿದ್ದಪ್ಪ, ವಸಂತಿ, ವನಪಾಲಕ ಪರುಶರಾಂ ಇದ್ದರು.