ಜಿಲ್ಲೆ

ಯುಜಿಡಿಗೆ 128.74 ಕೋಟಿ ರೂ. ಅನುಮೋದನೆ

ಚನ್ನಪಟ್ಟಣ: ಅಂತೂ.. ಇಂತೂ.., ನಗರದ ಯುಜಿಡಿ ಯೋಜನೆಗೆ ಕಾಲ ಕೂಡಿ ಬಂದಿದ್ದು, 2ನೇ ಹಂತದ ಕಾಮಗಾರಿಗೆ ಈ ಹಿಂದಿನ 94 ಕೋಟಿ ರೂ. ಸೇರಿ ವಿಸ್ತ್ರತ ಯೋಜನೆಗೆ 128.74 ಕೋಟಿ ರೂ. ಪರಿಷತ ಅನುದಾನಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕಳೆದ 15 ವರ್ಷಗಳಿಂದ ಯುಜಿಡಿ ಯೋಜನೆ ನನೆಗುದಿಗೆ ಬಿದ್ದಿತ್ತು. ಮೊದಲ ಹಂತದಲ್ಲಿ ಕೇವಲ ಪೈಪ್​ಲೈನ್​ ಕಾಮಗಾರಿ ಮಾತ್ರ ಮಾಡಲಾಗಿದ್ದು, ಎರಡನೇ ಹಂತದಲ್ಲಿ ಎಸ್​ಟಿಪಿ ಟಕ, ವೆಟ್​ವೆಲ್​ ನಿರ್ಮಾಣ ಹಾಗೂ ಹೆಚ್ಚುವರಿ ಪೈಪ್​ಲೈನ್​ಗೆ ಅನುದಾನದ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ಅಂದಿನ ಸಿಎಂ ಬಸವರಾಜ್​ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರದಲ್ಲಿ ಯೋಗೇಶ್ವರ್​ ಎಂಎಲ್​ಸಿ ಆಗಿದ್ದ ವೇಳೆ 94 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ ಅನುದಾನವನ್ನು ಅಂದಿನ ಶಾಸಕ ಎಚ್​.ಡಿ.ಕುಮಾರಸ್ವಾಮಿ ""ನಾ ತಂದಿರುವುದಾಗಿ ಎಂದೂ.., ಸಿ.ಪಿ.ಯೋಗೇಶ್ವರ್​ ತಾವು ತಂದಿರುವುದು ಎಂತಲೂ ಕ್ರೆಡಿಟ್​ವಾರ್​ ಸಹ ನಡೆಸಿದ್ದರು. ಆದರೆ, ಇದೀಗ ಎರಡನೇ ಹಂತದ ಕಾಮಗಾರಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆಯಿಟ್ಟಿದ್ದ ಸಿ.ಪಿ.ಯೋಗೇಶ್ವರ್​ ಕ್ರಿಯಾಯೋಜನೆಗೆ ಸರ್ಕಾರದಿಂದ 128.74 ಕೋಟಿ ರೂ. ಅನುದಾನ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಎಸ್​ಟಿಪಿ ಲ್ಯಾಂಡ್​ ಸ್ವಾಧಿನಕ್ಕೆ ಕ್ರಮ ಯುಜಿಡಿಯ ಎರಡನೇ ಹಂತದ ಕಾಮಗಾರಿಗೆ ಈಗಾಗಲೇ 94 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್​ ಪ್ರಕ್ರಿಯೆ ಸಹ ನಡೆದಿತ್ತು. ಆದರೆ, ಯುಜಿಡಿಯಲ್ಲಿ ಬರುವ ವಿಶೇಷ ತ್ಯಾಜ್ಯ ನೀರು ಸಂಸ್ಕರಣಾ ಟಕ (ಎಸ್​ಟಿಪಿ) ನಿರ್ಮಾಣ ಮಾಡಲು 2015ರಲ್ಲಿ ಕೂಡ್ಲೂರು ಬಳಿ ನಗರಸಭೆಯಿಂದ ಖರೀದಿಸಿದ್ದ ಜಮೀನಿನಲ್ಲಿ ಎಸ್​ಟಿಪಿ ಟಕ ನಿರ್ಮಾಣ ಮಾಡಲು ಸಮಸ್ಯೆ ಆಗಿತ್ತು. ಈ ನಿಟ್ಟಿನಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ನಗರ ಪ್ರದೇಶದಲ್ಲೆ ಎಸ್​ಟಿಪಿ ಟಕ ನಿರ್ಮಾಣಕ್ಕೆ ಅಗತ್ಯ ಜಮೀನು ಭೂಸ್ವಾಧಿನ ಮಾಡುವ ಪ್ರಕ್ರಿಯೆಗೆ ಶಾಸಕ ಸಿ.ಪಿ.ಯೋಗೇಶ್ವರ್​ ಕ್ರಮ ಕೈಗೊಂಡು, ಭೂಸ್ವಾಧಿನ ಹಾಗೂ ಪೈಪ್​ಪೈನ್​ ಸೇರಿ 94 ಕೋಟಿ ರೂ. ಅನುದಾನದ ಜತೆಗೆ ಹೆಚ್ಚುವರಿಯಾಗಿ ಕ್ರಿಯಾಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದರು. ಇದೀಗ, ಸರ್ಕಾರದಮಟ್ಟದಲ್ಲಿ ಒತ್ತಡ ಹಾಕಿಸಿ ಆಡಳಿತಾತ್ಮಕ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಯುಜಿಡಿಯ ಎರಡನೇ ಹಂತದ ಕಾಮಗಾರಿಗೆ 128.74 ಕೋಟಿ ರೂ. ವೆಚ್ಚದಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಈ ನಿಟ್ಟಿನಲ್ಲಿ ಶ್ರೀವೇ ಭೂಸ್ವಾಧಿನ ಪ್ರಕ್ರಿಯೆ ಮುಗಿಸಿ ಯುಜಿಡಿಯ ಎರಡನೇ ಹಂತದ ಕಾಮಗಾರಿಗೆ ಟೆಂಟರ್​ ಪ್ರಕ್ರಿಯೆ ಮಾಡಲಾಗುತ್ತದೆ. > ಸಿ.ಪಿ.ಯೋಗೇಶ್ವರ್​ ಶಾಸಕ ಚನ್ನಪಟ್ಟಣ