ಜಿಲ್ಲೆ

ಮೃತರ ಕುಟುಂಬಕ್ಕೆ 1 ಲಕ್ಷ ರೂ. ಹಸ್ತಾಂತರ

ಗಂಗೊಳ್ಳಿ: ಮೀನುಗಾರಿಕೆ ವೇಳೆ ಸಮುದ್ರಕ್ಕೆ ಬಿದ್ದು ಮೃತರಾದ ನಾರಾಯಣ ಮೊಗವೀರ ಪತ್ನಿ ಸಾಧುಗೆ ನಾಡೋಜ ಡಾ.ಜಿ.ಶಂಕರ್ ಸಹಾಯಾರ್ಥ ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘ ಅಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ ಮನೆಗೆ ತೆರಳಿ ಒಂದು ಲಕ್ಷ ರೂ. ನೀಡಿ ಸಾಂತ್ವನ ಹೇಳಲಾಯಿತು.

ಎಂ.ಎಂ.ಸುವರ್ಣ ಆರಾಟೆ ಜಗದೀಶ್ ಮಾರ್ಕೋಡ್, ಸದಾನಂದ ಬಳ್ಕೂರು, ನಾಗೇಶ್ ಪಿ. ಕಾಂಚನ್ ನಾಡ, ಪುಂಡಲೀಕ್ ಬಂಗೇರ, ಚಂದ್ರ ನಾಯ್ಕ ಕಟ್‌ಬೇಲ್ತೂರು, ನಾಗರಾಜ್ ಪುತ್ರನ್ ಸುಳ್ಸೆ, ರಮೇಶ್ ಕುಂದರ್ ಕೋಟ, ರಾಜು ಮೆಂಡನ್ ತ್ರಾಸಿ, ರತ್ನ ಆರ್. ಕುಂದರ್ ಕೊಲ್ಲೂರು, ಶ್ಯಾಮಲಾ ಜಿ. ಚಂದನ್ ಸುಳ್ಸೆ, ಶ್ಯಾಮಲಾ ಕುಂದರ್ ನಾವುಂದ, ಉಮೇಶ ಬಡಾಕರೆ, ಸತೀಶ್ ಗುಲ್ವಾಡಿ, ಚಂದ್ರ ಮೊಗವೀರ, ಸೋಮನಾಥ್ ಬೈಂದೂರು ಮತ್ತಿತರರು ಉಪಸ್ಥಿತರಿದ್ದರು.