ಹೊಸಕೋಟೆ : ಕಾರ್ಗಿಲ್ನಲ್ಲಿ ಹುತಾತ್ಮರಾದ ವೀರ ಯೋಧ ನಗರದ ಭರತ್ ಬಬನ್ ಮಸ್ಕಿ ಅವರ ಕುಟುಂಬಕ್ಕೆ ವಹ್ನಿಕುಲ ತಿಗಳ ಸಂದ ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್ ಅವರು 1 ಲಕ್ಷ ರೂ. ಸಹಾಯಧನ ನೀಡಿದರು.
ಈ ವೇಳೆ ಮಾತನಾಡಿದ ಅವರು, ದೇಶಕ್ಕಾಗಿ ಹೋರಾಡಿ ವೀರ ಮರಣವನ್ನಪ್ಪಿದ ಯೋಧರ ಕುಟುಂಬಕ್ಕೆ ಸಹಾಯ ಮಾಡುವುದು ಸಾರ್ಥಕ ಭಾವ ಮೂಡಿಸುತ್ತದೆ. ಸೇನೆಯಲ್ಲಿ 10 ವರ್ಷ ಸೇವೆ ಸಲ್ಲಿಸಿ, ಕಾರ್ಗಿಲ್ನಲ್ಲಿ ಶತ್ರುಗಳ ಬಾಂಬ್ ದಾಳಿಗೆ ವೀರಮರಣ ಹೊಂದಿದ ಸಿಪಾಯಿ ಭರತ್ ಬಬನ್ ಮಸ್ಕಿ ಅವರ ಸೇವೆ ಸ್ಮರಣೀಯ ಎಂದರು. ಇದೇ ವೇಳೆ ನಗರದ ದಂಡುಪಾಳ್ಯದ ಜ್ಯೋತಿಯಮ್ಮ ದೇಗುಲ ಹಾಗೂ ತಿಮ್ಮಸಂದ್ರದ ಶ್ರೀ ಬಸವಣ್ಣ ದೇವಸ್ಥಾನದ ನಿರ್ಮಾಣಕ್ಕೆ ದೇಣಿಗೆ ನೀಡಿದ ಜಯರಾಜ್ ಅವರು, "ಶ್ರೀ ಕರಗ ಒಂದು ಆಧ್ಯಾತ್ಮಿಕ ಚಿಂತನೆ' ಪುಸ್ತಕವನ್ನು ಬಿಡುಗಡೆ ಮಾಡಿದರು.
ಡಾ.ಸಿ.ಜಯರಾಜ್ ಅವರ ಪತ್ನಿ ಲಕ್ಷಿ$್ಮ, ಪುತ್ರ ಸಚಿನ್, ನಿವೃತ್ತ ಪೊಲೀಸ್ ಅಧಿಕಾರಿ ಸುಬ್ಬಣ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶ್ ಗೌಡ, ಯೋಜನಾ ಪ್ರಾಧಿಕಾರ ನಿರ್ದೇಶಕ ಡಾ.ಎಚ್ಎಂ.ಸುಬ್ಬರಾಜ್, ಉಮೇಶ್, ರವಿ, ಮಂಜುನಾಥ್, ಆನಂದ್, ಯೋಧ ಬಸವರಾಜ್ ಇದ್ದರು.