ರಾಯಬಾಗ: ಪಜಾತಿ ಕಾಲನಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡುವ ಮೂಲಕ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ಚಿಂಚಲಿ ಪಟ್ಟಣದ ಅಜಿತ್ ನಗರ ಹಾಗೂ ಭಿರಡಿ ಗ್ರಾಮದ ಪಜಾತಿ ಜನಪ್ರದೇಶದಲ್ಲಿ ಜಿಪಂ ಇಲಾಖೆಯ ಎಸ್ಸಿಪಿ ಟಿಎಸ್ಪಿ ಯೋಜನೆಯಡಿ ಮಂಜೂರಾದ 1 ಕೋಟಿ ರೂ. ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.
ಅಂಕುಶ ಜಾಧವ, ಸದಾಶಿವ ೂರ್ಪಡೆ, ಮಹಾದೇವ ಬೋರಗಾಂವ, ರಮೇಶ ಹಾರೂಗೇರಿ, ಲಕ್ಷ$್ಮಣ ತುಳಸಿಗೇರಿ, ಸುಭಾಷ ಕೋರೆ, ರಾಜು ಮಹೇಶ್ವರಿ, ಮುರುಗೇಶ ನಿಶಾನದಾರ, ರಾಮಚಂದ್ರ ಮೈಶಾಳೆ, ಕಲ್ಮೇಶ ನಿಡವಣಿ, ಕೆಂಪಣ್ಣ ಮೈಶಾಳೆ, ಮಹಾದೇವ ಜೋಗಿ, ರಾಜು ಪೋಳ, ವಿಲಾಸ ಬಸನಾಯ್ಕ, ಸಹದೇವ ಯಡ್ರಾವಿ, ಕುಮಾರ ಖೋತ, ಬಾಹುಬಲಿ ಹಂಡೆಗೆ, ವಸಂತ ಕರಾಕಾಯಿ, ಕಿರಣ ಪಾಟೀಲ ಇತರರಿದ್ದರು.