ಬೆಂಗಳೂರು: ಉಪಸಮರದ ಅಖಾಡದಲ್ಲಿ ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರದ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆದಾಗಿದೆ. ಸೋಮವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆದಿದ್ದು, ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರಗೊಂಡಿದೆ. ಕರೊನಾ ಆತಂಕದ ನಡುವೆಯೂ ಮತದಾರರು ಪ್ರಜಾಪ್ರಭುತ್ವ ಹಬ್ಬವನ್ನ ಖುಷಿಯಾಗಿ ಆಚರಿಸಿದ್ದಾರೆ.
ಸಂಜೆ 6 ಗಂಟೆಯೊಳಗೆ ಮತದಾನ ಕೇಂದ್ರಕ್ಕೆ ಬಂದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಚುನಾವಣಾ ಅಧಿಕಾರಿಗಳು 6ಕ್ಕೆ ಸರಿಯಾಗಿ ಮತ ಕೇಂದ್ರದ ಗೇಟ್ ಬಂದ್ ಮಾಡಿದರು. ಇವಿಎಂ ಮತಯಂತ್ರಗಳನ್ನ ಸೀಲ್ಡ್ ಮಾಡಿದ ಚುನಾವಣಾಧಿಕಾರಿಗಳು, ನಿಗದಿತ ಸ್ಥಳಕ್ಕೆ ಕೊಂಡೊಯ್ದರು. ಟ್ರೈಆ್ಯಂಗಲ್ ಸ್ಪರ್ಧೆ ಇರುವ ಎರಡೂ ಕ್ಷೇತ್ರದಲ್ಲಿ ಮತದಾರರು ಉತ್ಸಾಹದಿಂದ ಬಂದು ಹಕ್ಕು ಚಲಾಯಿಸಿದರು. ಕೋವಿಡ್ ಸೋಂಕಿತ ಮತದಾರರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಚುನಾವನೆ ಮುಗಿಯುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್, ಜೆಸಿಎಸ್ ನಾಯಕರಿಂದ ವೋಟಿಂಗ್ ಪರ್ಸಂಟೇಜ್ ಲೆಕ್ಕಾಚಾರ ಶುರುವಾಗಿದೆ.
RR Nagar-Shira-By Election-Voting Complete