ಹುಬ್ಬಳ್ಳಿ: ಬ್ಲೂಮರ್ಸ್ ಗ್ರೂಪ್ ಯೂತ್ ಆರ್ಗನೈಸೇಶನ್ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ರಾಜಸ್ತಾನ ಪ್ರಿಮಿಯರ್ ಲೀಗ್ ನಲ್ಲಿ (ಆರ್ ಪಿ ಎಲ್) ಅರಿಹಂತ ಯಂಗ್ ಸ್ಟಾರ್ಸ್ ತಂಡ 2024ನೇ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಡಿ. 15ರಿಂದ 18ರ ವರೆಗೆ ನಡೆದ 12 ತಂಡಗಳ ಮುಖಾಮುಖಿಯ ಅಂತಿಮ ಪಂದ್ಯದಲ್ಲಿ ಅರಿಹಂತ ಯಂಗ್ ಸ್ಟಾರ್ಸ್, ಸಿಸಿ ಇಲೆವೆನ್ ತಂಡವನ್ನು 7 ವಿಕೆಟ್ ನಿಂದ ಸೋಲಿಸಿ ಪ್ರಶಸ್ತಿ ಪಡೆದುಕೊಂಡಿತು.
ಸರಣಿ ಶ್ರೇಷ್ಠ ಅರಿಹಂತ್ ಯಂಗ ಸ್ಟಾರ್ಸ್ ನ ನಾಯಕ ಅಜಯ ಓಸವಾಲ, ಉತ್ತಮ ಬೌಲರ್ ಅಮಿತ ರಾಜಪುರೋಹಿತ, ಉತ್ತಮ ಬ್ಯಾಟ್ಸ್ ಮನ್ ಸಿ.ಸಿ. ಇಲೆವನ್ ನಾಯಕ ಹರ್ಷ ತಾತೆಡ ಪ್ರಶಸ್ತಿ ಸ್ವೀಕರಿಸಿದರು.
ಸಹಾಯಕ ಪೊಲೀಸ ಆಯುಕ್ತ ಉಮೇಶ ಚಿಕಮಠ, ಶಿವಪ್ರಕಾಶ ನಾಯಕ ಅವರು ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿದರು.
ಸುರೇಶ್ ಸಿ. ಜೈನ್, ಪ್ರವಿಣ ಭೂರಟ್, ಬ್ಲೂಮರ್ ಗ್ರೂಪ್ ಸದಸ್ಯರಾದ ಪ್ರಕಾಶ ಜೈನ್, ವಿಕ್ರಮ್ ಪೋಮಾನಿ, ಮನೀಶ್ ಕೊಠಾರಿ, ದಿನೇಶ್ ರಾಥೋಡ್, ಹರಿಸಿಂಗ್ ರಾಜಪುರೋಹಿತ್, ಸುಶೀಲ್ ಜೈನ್ ಮತ್ತು ಮಾನಕ್ಷಾ ರಾಜಪುರೋಹಿತ, ಮುಖ್ಯ ಪ್ರಾಯೋಜಕರಾದ ಜಿ.ಎಂ., ರುದ್ರಾಕ್ಷ ಮಾರ್ಕೆಟಿಂಗ್ ಮಾಲೀಕ ರಾಜು ದವೆ ಉಪಸ್ಥಿತರಿದ್ದರು.