ಉಡುಪಿ: ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ ಆರ್ ಪಿ ಎಫ್ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆವ್ಯಕ್ತವಾಗಿದೆ.
ಭಟ್ಕಳಕ್ಕೆ ತೆರಳುತ್ತಿದ್ದ ಯುವತಿಯೊಬ್ಬರು ಮಂಗಳೂರು&ಮಾಡ್ಗಾವ್ ಪ್ಯಾಸೆಂಜರ್ ರೈಲು ಹತ್ತುವಾಗ ಹಠಾತ್ತನೆ ಜಾರಿಬಿದ್ದು, ಎರಡೂ ಕಾಲುಗಳು ಪ್ಲಾಟ್ಫಾಮ್ರ್ ಮತ್ತು ರೈಲಿನ ನಡುವೆ ಸಿಕ್ಕಿಕೊಂಡವು. ಇದನ್ನು ಗಮನಿಸಿದ ಆರ್ ಪಿ ಎಫ್ ಸಿಬ್ಬಂದಿ ಅರ್ಪಣಾ ಕೆಟಿ ಆಕೆಯನ್ನು ರಸಿ ಪ್ಲಾಟ್ ಾರಂನಲ್ಲಿ ಕುಳ್ಳಿರಿಸಿದರು. ವಾಕಿ ಟಾಕಿ ಮೂಲಕ ಗಾರ್ಡ್ ಮತ್ತು ಲೋಕೋ ಪೈಲಟ್ಗೆ ತಿಳಿಸುವ ಮೂಲಕ ಈ ನಡುವೆ ಕರ್ತವ್ಯದಲ್ಲಿದ್ದ ರೈಲ್ವೆ ಸಿಬ್ಬಂದಿ ರೈಲನ್ನು ನಿಲ್ಲಿಸಿದರು. ಪ್ಲಾಟ್ಫಾಮ್ರ್ನಲ್ಲಿದ್ದ ಇನ್ಸ್ಪೆಕ್ಟರ್ ಆರ್ಪಿಎಫ್ ಸ್ಥಳಕ್ಕಾಗಮಿಸಿ ಯುವತಿಯ ಅರೋಗ್ಯ ವಿಚಾರಿಸಿ, ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ರೈಲು ಹತ್ತಲು ಸಹಾಯ ಮಾಡಿದರು. ಭಟ್ಕಳದಲ್ಲಿ ಕರ್ತವ್ಯದಲ್ಲಿದ್ದ ಆರ್ಪಿಎಫ್ ಸಿಬ್ಬಂದಿ ಪ್ರಯಾಣಿಕೆಯನ್ನು ಭೇಟಿ ಮಾಡಿ ವಿವರಗಳನ್ನು ಸಂಗ್ರಹಿಸಿದರು.