ಜಿಲ್ಲೆ

ಬೆಳಗಾವಿಯಲ್ಲಿ "ರಾಯಲ್​ ಓಕ್​' ಉದ್ಘಾಟನೆ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಗ್ರಾಹಕರಿಗೆ ನವನವೀನ ಶೈಲಿಯ ಪೀಠೋಪಕರಣ ಒಂದೇ ಕಡೆ ಖರೀದಿಸುವ ಅವಕಾಶವನ್ನು "ರಾಯಲ್​ ಓಕ್​' ಮಳಿಗೆಯಲ್ಲಿ ಕಲ್ಪಿಸಲಾಗಿದ್ದು, ಅಂತಾರಾಷ್ಟ್ರೀಯ ಉತ್ಪನ್ನಗಳನ್ನು ಕೈಗೆಟಕುವ ದರದಲ್ಲಿ ಖರೀದಿಸಬಹುದು ಎಂದು ಹೊಸ ಸ್ಟೋರ್​ ಓಪನಿಂಗ್​ ವಿಭಾಗದ ಮುಖ್ಯಸ್ಥ ತಮ್ಮಯ್ಯ ಕೊಟೇರ್​ ತಿಳಿಸಿದರು.

ಬೆಳಗಾವಿ ನಗರದ ಬಾಕ್ಸೆಟ್​ ರಸ್ತೆಯಲ್ಲಿ ಬುಧವಾರ "ರಾಯಲ್​ ಓಕ್​'ನ 63ನೇ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ಮಳಿಗೆಯು 12 ಸಾವಿರ ಚದರ ಅಡಿಗಳಷ್ಟು ವಿಶಾಲ ಸ್ಥಳವನ್ನು ಹೊಂದಿದ್ದು, ಇಲ್ಲಿ ಲಿವಿಂಗ್​ ರೂಮ್​, ಬೆಡ್​ ರೂಮ್​, ಡೈನಿಂಗ್​ ಏರಿಯಾ, ಸ್ಟಡಿ ರೂಮ್​ ಮತ್ತು ಆಫೀಸ್​, ಔಟ್​ಡೋರ್​, ಹೋಮ್​ ಡೆಕೋರ್​, ಮ್ಯಾಟ್ರೆಸ್​ ಮೊದಲಾದ ಪೀಠೋಪಕರಣಗಳು ಲಭ್ಯ ಇವೆ. ಉದ್ಘ್ಘಾಟನಾ ಕೊಡುಗೆಯಾಗಿ ಪ್ರತಿಯೊಂದು ಖರೀದಿಗೂ ವಿವಿಧ ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.

ರಾಯಲ್​ ಓಕ್​ ಫ್ರಾಂಚೈಸ್​ ಪಾಲುದಾರ ಸುನೀಲ್​ ಕುಮಾರ್​ ಮಾತನಾಡಿ, ದೇಶದಾದ್ಯಂತ ರಾಯಲ್​ ಓಕ್​ 200 ಮಳಿಗೆ ಹೊಂದಿದ್ದು, ಇದೀಗ ಕರ್ನಾಟಕದಲ್ಲಿ ಹೊಸದಾಗಿ 63ನೇ ಮಳಿಗೆಯನ್ನು ಬೆಳಗಾವಿಯಲ್ಲಿ ಆರಂಭಿಸಲಾಗಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಪೀಠೋಪಕರಣಗಳು ಮತ್ತು ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಈ ಮಳಿಗೆ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ವಿನಂತಿಸಿದರು.

ರಾಯಲ್​ ಓಕ್​ ಮಳಿಗೆಗಳಲ್ಲಿ ಲಭ್ಯವಿರುವ ವಿನೂತನ, ಹೊಸ ಬಗೆಯ ಪೀಠೋಪಕರಣಗಳನ್ನು ದೇಶ, ವಿದೇಶಗಳಲ್ಲಿರುವ 480 ಕ್ಕೂ ಹೆಚ್ಚು ಫ್ಯಾಕ್ಟರಿಗಳಲ್ಲಿ ತಯಾರಿಸಲಾಗುತ್ತಿದ್ದು, 5 ಸಾವಿರಕ್ಕೂ ಹೆಚ್ಚು ಜನರು ನುರಿತ ಕೆಲಸಗಾರರಿದ್ದಾರೆ. ಉತ್ಕ ೃಷ್ಟ ಗುಣಮಟ್ಟದ, ಹೊಸ ಬಗೆಯ ವಿನ್ಯಾಸದ ಪೀಠೋಕರಣಗಳು ಮಾತ್ರ ನಮ್ಮಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಆನ್​ಲೈನ್​ ಮಾರುಕಟ್ಟೆ ಜತೆಗೆ ಇಎಂಐ ಸೌಲಭ್ಯ ಕೂಡ ಒದಗಿಸಲಾಗುತ್ತಿದೆ ಎಂದು ಹೇಳಿದರು.

ರಾಯಲ್​ ಓಕ್​ ಫ್ರಾಂಚೈಸಿ ಆಪರೇಷನ್​ ಮುಖ್ಯಸ್ಥ ಮಹೇಶ ಪಂಡಿತ ಮಾತನಾಡಿ, ಈ ಮಳಿಗೆಯಲ್ಲಿ ವಿಶೇಷವಾದ "ಕಂಟ್ರಿ ಸ್ಕೋರ್​' ವಿಭಾಗವಿದ್ದು, ಇಲ್ಲಿ ಅಮೆರಿಕ, ಇಟಲಿ, ಮಲೇಷಿಯಾ ಮತ್ತು ಭಾರತದ ಉತ್ತಮ ಮತ್ತು ಅನನ್ಯ ಪೀಠೋಪಕರಣಗಳನ್ನು ಪ್ರದರ್ಶಿಸಲಾಗುತ್ತದೆ. ರಾಯಲ್​ಓಕ್​ ಭಾರತದಾದ್ಯಂತ ಮಹಾನಗರಗಳು ಸೇರಿ 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಮಳಿಗೆಗಳನ್ನು ಆರಂಭಿಸುತ್ತಿದೆ. 1 ಕೋಟಿಗೂ ಹೆಚ್ಚು ಮಂದಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ. ನಾವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಗುಜರಾತ್​ನಿಂದ ನಾಗಾಲ್ಯಾಂಡ್​ವರೆಗೆ ಮಳಿಗೆಗಳನ್ನು ಹೊಂದಿದ್ದೇವೆ ಎಂದರು.

ರಾಯಲ್​ ಓಕ್​ ಫ್ರಾಂಚೈಸ್​ ಪಾಲುದಾರರಾದ ಅನುಬಾಯಿ, ರಾವೇಂದ್ರ, ಶ್ವೇತಾ ಇತರರಿದ್ದರು.