ಕುಶಾಲನಗರದ ಜಾತ್ರಾ ಮೈದಾನದಲ್ಲಿ ನಡೆದ ಕೂರ್ಗ್ ವಾಟರ್ ಪಾರ್ಕ್ ಪ್ರಾಯೋಜಕತ್ವದ ಲೆಜೆಂಡ್ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಪ್ರಮೋದ್ ಮುತ್ತಪ್ಪ ಮಾಲೀಕತ್ವದ ರಾಯಲ್ ಗ್ಯಾಲಕ್ಸಿ ತಂಡ ಚಾಂಪಿಯನ್ ಆಗಿದೆ. 
ಜಿಲ್ಲೆ

ರಾಯಲ್ ಗ್ಯಾಲಕ್ಸಿ ತಂಡ ಚಾಂಪಿಯನ್

ಕುಶಾಲನಗರ: ಕೂರ್ಗ್ ವಾಟರ್ ಪಾರ್ಕ್ ಪ್ರಾಯೋಜಕತ್ವದಲ್ಲಿ ಕುಶಾಲನಗರದ ಜಾತ್ರಾ ಮೈದಾನದಲ್ಲಿ ಆಯೋಜಿಸಿದ್ದ ಮೂರನೇ ವರ್ಷದ ಲೆಜೆಂಡ್ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಪ್ರಮೋದ್ ಮುತ್ತಪ್ಪ ಮಾಲಿಕತ್ವದ ಉಲ್ಲಾಸ್ ನಾಯಕತ್ವದ ರಾಯಲ್ ಗ್ಯಾಲಕ್ಸಿ ತಂಡ ಚಾಂಪಿಯನ್ ಆಗಿದೆ.

ಕಳೆದ ಐದು ದಿನಗಳಿಂದ ನಡೆದ ಪಂದ್ಯಾವಳಿಯಲ್ಲಿ 12 ತಂಡಗಳು ಭಾಗವಹಿಸಿದ್ದವು. ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಪ್ರಮೋದ್ ಮುತ್ತಪ್ಪ ಮಾಲೀಕತ್ವದ ಉಲ್ಲಾಸ್ ನಾಯಕತ್ವದ ರಾಯಲ್ ಗ್ಯಾಲಕ್ಸಿ ತಂಡ ಕಿರಣ್ ಮಾಲಿಕತ್ವದ ಹರೀಶ್ ನಾಯಕತ್ವದ ಹರ್ಷಲ್ ಫ್ರೆಂಡ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ, ಆಕರ್ಷಕ ಟ್ರೋಫಿ ಹಾಗೂ 1 ಲಕ್ಷ ರೂ. ಪಡೆಯಿತು.

ಹರ್ಷಲ್ ಫ್ರೆಂಡ್ಸ್ ತಂಡ ರನ್ನರ್ ಅಪ್‌ಗೆ ತೃಪ್ತಿಪಟ್ಟು ಟ್ರೋಫಿ ಹಾಗೂ 50 ಸಾವಿರ ರೂ. ನಗದು ಪಡೆಯಿತು. ತೃತೀಯ ಸ್ಥಾನವನ್ನು ನವೀನ್ ಮಾಲಿಕತ್ವದ ಪೆಮ್ಮಯ್ಯ ನಾಯಕತ್ವದ ಟಿಮ್ ಪೆಪ್ಸಿ ತಂಡ ಹಾಗೂ ನಾಲ್ಕನೇ ಸ್ಥಾನವನ್ನು ವೈಲ್ಡ್ ಕ್ಯಾಟ್ ತಂಡ ಪಡೆಯಿತು. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕೂರ್ಗ್ ವಾಟರ್ ಪಾರ್ಕ್ ಮಾಲೀಕ ಲಕ್ಷ್ಮೀ ನಾರಾಯಣ(ನಾಣಿ), ಪುರಸಭಾ ಸದಸ್ಯ ಪ್ರಮೋದ್ ಮುತ್ತಪ್ಪ, ಅಭಿಯಂತರ ಶೈಜನ್ ಪೀಟರ್, ಡಿ.ಡಿ.ಕಿರಣ್ ಹಾಗೂ ತಂಡದ ಮಾಲೀಕರು ಇದ್ದರು.