ಹುಬ್ಬಳ್ಳಿ: ರಾಯಲ್ ಎನಫಿಲ್ಡ್ ಹೆಸರೇ ಬೈಕ್ ಪ್ರಿಯರನ್ನು ಆಕರ್ಷಿಸುತ್ತದೆ, ಇಂತಹ ವಿಶ್ವದರ್ಜೆಯ ವಾಹನವನ್ನು ಬೈಕಿಂಗ್ ಸಮುದಾಯಕ್ಕೆ ಇನ್ನಷ್ಟು ಹತ್ತಿರಕ್ಕೆ ತರಲು ರಾಯಲ್ ಎನಫಿಲ್ಡ್ ನೂತನ ಶೋರೂಮ್ ಅನ್ನು ಇಲ್ಲಿಯ ವಿದ್ಯಾನಗರ ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆ ಬಿವಿಬಿ ಕ್ಯಾಂಪಸ್ ಬಳಿಯಲ್ಲಿ ಆರಂಭಿಸಲಾಗಿದೆ.
ಉತ್ತರ ಕರ್ನಾಟಕದ ಪ್ರಮುಖ ವಾಹನ ವಿತರಕ ಸಂಸ್ಥೆಯಾಗಿರುವ ಕುಮಾರ ಗ್ರುಪ್ ನ ಕುಮಾರ್ ಆಟೋ ಹೌಸ್ ನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಶೋರೂಮ್ ಅನ್ನು ಭಾನುವಾರ ರಾಯಲ್ ಎನಫಿಲ್ಡ್ ವಲಯ ಮುಖ್ಯಸ್ಥ ಡಿ.ಎಸ್. ಸತೀಶ ಉದ್ಘಾಟಿಸಿದರು. ನೂತನ ಮಳಿಗೆಯಲ್ಲಿನ ಗ್ರಾಹಕ ಸ್ನೇಹಿ ಸೌಲಭ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕುಮಾರ್ ಗ್ರುಪ್ ಎಂಡಿ ಶಶಿಕುಮಾರ ದೇಸಾಯಿ ಮಾತನಾಡಿ, ವೋಕ್ಸ ವೇಗನ್, ಸಿಟ್ರೋಯೆನ್, ಜೀಪ್, ಕುಬೊಟಾ ಟ್ರ್ಯಾಕ್ಟರ್ ಹಾಗೂ ಎಸ್ಕಾರ್ಟ್ಸ್ ಫಾರ್ಮಟ್ರಾಕ್ ಟ್ರ್ಯಾಕ್ಟರ್ ಸೇರಿದಂತೆ ಪ್ರಸಿದ್ಧ ಬ್ರ್ಯಾಂಡ್ ಗಳನ್ನು ಗ್ರಾಹಕರಿಗೆ ತಲುಪಿಸುತ್ತಿರುವ ಕುಮಾರ್ ಆಟೋ ಹೌಸ್ ಗೆ ರಾಯಲ್ ಎನಫಿಲ್ಡ್ ಹೊಸ ಸೇರ್ಪಡೆಯಾಗಿದೆ. ಎಂದಿನಂತೆ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ವಾಗ್ದಾನ ಮಾಡುತ್ತೇವೆ ಎಂದರು.
ರಾಯಲ್ ಎನಫಿಲ್ಡ್ ನ ಅಂತಾರಾಷ್ಟ್ರೀಯ ರಿಟೇಲ್ ವಿನ್ಯಾಸದ ಪ್ರಕಾರ ನಿರ್ಮಿಸಲ್ಪಟ್ಟ ಶೋರೂಮ್ ನಲ್ಲಿ ಗ್ರಾಹಕ ಸ್ನೇಹಿ ಸೌಲಭ್ಯಗಳಿದ್ದು, ಉತ್ತಮ ಮಾರಾಟ ಹಾಗೂ ಸೇವಾ ಅನುಭವ ನೀಡುವ ಗುರಿ ಹೊಂದಲಾಗಿದೆ. ಕಳೆದ 30 ವರ್ಷಗಳಿಂದ ಆಟೊಮೊಬೈಲ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಗ್ರಾಹಕರ ಸಂತೃಪ್ತಿಯೊಂದೇ ಕಂಪನಿಯ ಉದ್ದೇಶವಾಗಿದೆ. 14 ಮಾದರಿಯ ರಾಯಲ್ ಎನಫಿಲ್ಡ್ ಬೈಕ್ ಗಳು ಮಾರಾಟಕ್ಕೆ ಇವೆ. ಇದನ್ನು ಉತ್ತಮ ಸರ್ವಿಸ್ ಹಬ್ ಮಾಡುವ ಗುರಿ ಇದೆ ಎಂದರು.
ಅನಿಲ ಪಾಟೀಲ, ಅಕ್ಷಯ ದೇಸಾಯಿ, ಅಶೋಕ ಮಾಳಗಿ, ರಮೇಶ ಕಾಂಬಳೆ, ಕುಮಾರ್ ಗ್ರುಪ್ ನ ಪದಾಧಿಕಾರಿಗಳು, ಸಿಬ್ಬಂದಿ ಇದ್ದರು. ಇದೇ ಸಂದರ್ಭದಲ್ಲಿ ರಾಯಲ್ ಎನಫಿಲ್ಡ್ ಗ್ರಾಹಕರಿಂದ ರ್ಯಾಲಿ ನಡೆಸಲಾಯಿತು.