ಸಿದ್ದಾಪುರ: ಅನಿವಾಸಿ ಭಾರತೀಯರಾಗಿ ದುಬೈನಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ಕೊಡಗು ಜಿಲ್ಲೆಯ ನೂರಾರು ಯುವಕರಿಂದ ಇತ್ತೀಚೆಗೆ ಕೂರ್ಗ್ ಕ್ರಿಕೆಟ್ ಫೆಸ್ಟ್ ಸೀಸನ್-1 ಪಂದ್ಯಾವಳಿ ಆಯೋಜಿಸಲಾಗಿತ್ತು.
ನೆಲ್ಯಹುದಿಕೇರಿ ನಿಶಾಬ್, ವಿರಾಜಪೇಟೆ ಕಲ್ಲುಬಾಣೆಯ ನೂರುದ್ದೀನ್ ನೇತೃತ್ವದಲ್ಲಿ ಶಾರ್ಜಾ ಈಗಲ್ ವತಿಯಿಂದ ಅಲ್ ಮದಾಮ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ಸ್ಟೇಡಿಯಂನ ಮೂರು ಮೈದಾನಗಳಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ 8 ತಂಡಗಳಾದ ರಾಯಲ್ ಚಾಕ್ ಸಿಟಿ ಕ್ರಿಕೆಟರ್ಸ್ , ಕರ್ನಾಟಕ ಜಿ ಮೆಕ್ ವಾರಿಯರ್ಸ್, ಕೂರ್ಗ್ ಈಗಲ್ಸ್, ಆಡಮ್ ಹಿಟರ್ಸ್, ಬ್ಲ್ಯಾಕ್ ಕೋಬ್ರಾಸ್, ನೆಲ್ಯಹುದಿಕೇರಿ ಫ್ರೆಂಡ್ಸ್, ಟರ್ಬೊ ಕ್ರಿಕೆಟರ್ಸ್, ರಫಾ ಫೈಟರ್ಸ್ ತಂಡಗಳ 142 ಆಟಗಾರರು ಪಾಲ್ಗೊಂಡು ಗಮನ ಸೆಳೆದರು.
ಎಂಟು ತಂಡಗಳ ನಡುವೆ ನಡೆದ ರೋಮಾಂಚನಕಾರಿ ಪಂದ್ಯಾಟದಲ್ಲಿ ವಿರಾಜಪೇಟೆ ಚೌಕಂಡಳ್ಳಿ ಅಶ್ಪಾಕ್, ನಿಶಾರ್ ಮಾಲೀಕತ್ವ ಹಾಗೂ ಮಿದ್ಲಾಜ್ ನಾಯಕತ್ವದ ರಾಯಲ್ ಚೋಕ್ ಸಿಟಿ ಕ್ರಿಕೆಟ್ ತಂಡ ಅಂತಿಮ ರೋಮಾಂಚನಕಾರಿ ಪಂದ್ಯಾಟದಲ್ಲಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.
ಎಮ್ಮೆಮಾಡುವಿನ ಗಪೂರ್, ಅಸ್ಲಾಂ ಮಾಲೀಕತ್ವದ ಕರ್ನಾಟಕ ಜಿಮೆಕ್ ವಾರಿಯರ್ಸ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದರೊಂದಿಗೆ ನಾಪೋಕ್ಲುವಿನ ಆರ್ಷದ್ ಮ್ಯಾನ್ ಆಫ್‌ದ ಸೀರಿಯಸ್ ಪ್ರಶಸ್ತಿ, ತಿತಿಮತಿ ಸಮೀರ್‌ಗೆ ಉತ್ತಮ ದಾಂಡಿಗ ಪ್ರಶಸ್ತಿ, ಎಡಪಾಲದ ಹಾರಿಸ್‌ಗೆ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡರು.
ಮುಖ್ಯ ಅತಿಥಿಗಳಾಗಿ ಸೈಯದ್, ಝೈನ್, ಕಲೀಲ್, ಅಜರ್, ಮಜೀದ್, ಜಿಯಾ, ಸಾಧಿಕ್, ರಾಹಿಲ್, ಜುನೈದ್, ಸಮ್ಮಾಸ್ ಮತ್ತಿತರರು ಹಾಜರಿದ್ದು ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿದರು.