ಜಿಲ್ಲೆ

ಬೆಂಗಳೂರಲ್ಲಿ ರೌಡಿಶೀಟರ್​ನ ಬರ್ಬರ ಹತ್ಯೆ

arunakunigal

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ರೌಡಿಶೀಟರ್​ನನ್ನು ದುಷ್ಕರ್ಮಿಗಳ ತಂಡ ಬರ್ಬರವಾಗಿ ಹತ್ಯೆ ಮಾಡಿದೆ.

ರವಿವರ್ಮ ಅಲಿಯಾಸ್ ಅಪ್ಪು ಕೊಲೆಯಾದವ. ವಿವೇಕನಗರದ ರೋಸ್ ಗಾರ್ಡನ್​ನಲ್ಲಿ ಮಂಗಳವಾರ ರಾತ್ರಿ ಹತ್ಯೆ ನಡೆದಿದೆ. ನಿನ್ನೆ ರಾತ್ರಿ ರವಿವರ್ಮ ತನ್ನ ಸ್ನೇಹಿತನ ಮನೆಗೆ ಬಂದಿದ್ದ. ಈ ವೇಳೆ ಮನೆಯಿಂದ 100 ಮೀಟರ್ ದೂರದಲ್ಲಿ ದುಷ್ಕರ್ಮಿಗಳ ತಂಡ ಹೊಂಚು ಹಾಕುತ್ತಾ ಕಾಯುತ್ತಿತ್ತು.

ಸ್ನೇಹಿತನ ಮನೆಯಿಂದ ರವಿವರ್ಮ ಹೊರಬರುತ್ತಿದ್ದಂತೆ ದುಷ್ಕರ್ಮಿಗಳ ದಾಳಿ ಮಾಡಿ ಮನಸೋಇಚ್ಛೆ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.