ಜಿಲ್ಲೆ

ರೌಡಿಶೀಟರ್ 6 ತಿಂಗಳು ಗಡಿಪಾರು

ಮರಿದೇವ ಹೂಗಾರ

ಹುಬ್ಬಳಿ: ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಇಲ್ಲಿಯ ಕೆಬಿ ನಗರದ ನಿವಾಸಿ ರೌಡಿಶೀಟರ್ ಶ್ರೀನಿವಾಸ ತಿರುಪತಿ ವೀರಾಪೂರ (24) ಎಂಬಾತನನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ 6 ತಿಂಗಳುವರೆಗೆ ಗಡಿಪಾರು ಮಾಡಲಾಗಿದೆ.
ಶ್ರೀನಿವಾಸನ ಮೇಲೆ ಈಗಾಗಲೇ ಹುಬ್ಬಳ್ಳಿ ಉಪನಗರ, ಶಹರ, ಘಂಟಿಕೇರಿ, ಬೆಂಡಿಗೇರಿ ಹಾಗೂ ಕೇಶ್ವಾಪುರ ಪೊಲೀಸ್ ಠಾಣೆಗಳಲ್ಲಿ ಕೊಲೆ ಪ್ರಯತ್ನ, ದರೋಡೆ, ಸುಲಿಗೆ, ಜೂಜಾಟ, ಕಳುವು ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು. ಆದರೂ ತನ್ನ ವರ್ತನೆ ಸುಧಾರಿಸಿಕೊಳ್ಳದೇ ಮತ್ತೆ ಕೊಲೆ ಯತ್ನ, ಹೊಡೆದಾಟ, ಮಾರಕಾಸ್ತ್ರ ಇಟ್ಟುಕೊಂಡು ಬೆದರಿಸುವಂತಹ ಕಾನೂನು ಬಾಹಿರ ಚಟುವಟಿಕೆ ಮುಂದುವರಿಸುತ್ತ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ. ಈತನ ಚಟುವಟಿಕೆ ಮೇಲೆ ಸತತ ನಿಗಾ ಇಡಲಾಗಿತ್ತು. ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳಲು ಮತ್ತು ಈತನ ಅಪರಾಧಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಮಾ. 26ರಂದು ಹು-ಧಾ ಪೊಲೀಸ್ ಆಯುಕ್ತಾಲಯ ಆದೇಶ ಹೊರಡಿಸಿದೆ.